ಉಡುಪಿ, ಫೆ. 16 (DaijiworldNews/AA): ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುವ ಉಡುಪಿ ಪ್ರೆಸ್ ಕ್ಲಬ್ ಸಮಿತಿಯ 2025-28ರ ಅವಧಿಯ ನೂತನ ಸಂಚಾಲಕರಾಗಿ ಅಂಕಿತ್ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.

ಫೆಬ್ರವರಿ 16ರಂದು ಉಡುಪಿ ಪ್ರೆಸ್ ಕ್ಲಬ್ನಲ್ಲಿ ಮಾಹಿತಿ ಅಧಿಕಾರಿ ಮಂಜುನಾಥ್ ಅವರ ಚುನಾವಣಾಧಿಕಾರಿತ್ವದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಸಮಿತಿಯ ನೂತನ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಹ-ಸಂಚಾಲಕರಾಗಿ ಉದಯವಾಣಿಯ ಗಣೇಶ್ ಕಲ್ಯಾಣಪುರ ಅವರು ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಾಜೇಶ್ ಶೆಟ್ಟಿ, ರಾಜು ಖಾರ್ವಿ, ಪುನೀತ್ ಸಾಲ್ಯಾನ್, ಎಸ್. ಜಿ. ನಾಯಕ್, ಹರೀಶ್ ಪಿ., ಗೋಪಾಲಕೃಷ್ಣ ಪಾದೂರು, ನಾಗರಾಜ್ ರಾವ್, ಮೈಕಲ್ ರೋಡ್ರಿಗಸ್, ನಿತೀಶ್ ಮಂಚಿ ಮತ್ತು ಜಯಂತ್ ಎ. ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನವಾಗಿ ಆಯ್ಕೆಯಾದ ಈ ತಂಡವು 2025 ರಿಂದ 2028ರ ಅವಧಿಯವರೆಗೆ ಕಾರ್ಯನಿರ್ವಹಿಸಲಿದೆ.