ಮಂಗಳೂರು, ಫೆ. 15 (DaijiworldNews/AK): ಪ್ರತಿಷ್ಟಿತ ಹಿಸ್ನಾ ಮಿಸ್ಸ್ ದಾಯ್ಜಿವರ್ಲ್ಡ್ -2026 ಕಿರೀಟವನ್ನು ಮಂಗಳೂರಿನ ಶಿಖಾ ಸುಶೀಲ್ ಮುಡಿಗೇರಿಸಿಕೊಂಡಿದ್ದಾರೆ.






https://daijiworld.ap-south-1.linodeobjects.com/Linode/images3/daijibeauty_15022026_2.jpg>



























ಶನಿವಾರ ರಾತ್ರಿ ಮಂಗಳೂರಿನ ಮಿಲಾಗ್ರಿಸ್ ಸಭಾಭವನದಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಶಿಖಾ ಸುಶೀಲ್ ಇವರನ್ನ ವಿಜೇತರೆಂದು ಘೋಷಿಸಲಾಯಿತು. ಜೊತೆಗೆ ಸೆರೆನಾ ಎವ್ಜಿನ್ ಪ್ರಥಮ ರನ್ನರ್ ಅಪ್ ಪಡೆದುಕೊಂಡರೆ ಫೇ ಮಾರ್ಟಿಸ್ ದ್ವಿತೀಯ ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
ದೇಶ ವಿದೇಶಗಳಿಂದ ಸಾವಿರಕ್ಕಿಂತಲೂ ಹೆಚ್ಚಿನ ಸ್ಪರ್ಧಿಗಳಿಂದ ನೊಂದಣಿ ಪಡೆದ ಈ ಸೌಂದರ್ಯ ಸ್ಪರ್ಧೆಯ ಪ್ರಥಮ ಹಂತಕ್ಕೆ ಇಪ್ಪತ್ತೈದು ಸ್ಪರ್ಧಿಗಳು ಆಯ್ಕೆಯಾಗಿದ್ದರು . ಇನ್ನು ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದ ಪ್ರಥಮ ಹಂತದಲ್ಲಿ ಹನ್ನೆರಡು ಫೈನಲಿಸ್ಟ್ ಗಳನ್ನ ಆಯ್ಕೆ ಮಾಡಲಾಗಿತ್ತು. ಫೆ.14 ರಂದು ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಆತ್ಮಸ್ಥೈರ್ಯ, ಸ್ವ ಪರಿಚಯಿಸುವಿಕೆ, ರ್ಯಾಂಪ್ ವಾಕ್, ಪ್ರಶ್ನೋತ್ತರಿ, ಹಾಗೂ ಎಕ್ಸ್ ಫಾಕ್ಟರ್ ವಿಭಾಗಳಲ್ಲಿ ಮಿಂಚಿದ ಶಿಖಾ ಸುಶೀಲ್, ಹಿಸ್ನಾ ಮಿಸ್ಸ್ ದಾಯ್ಜಿವರ್ಲ್ಡ್ ಕಿರೀಟವನ್ನು ಮುಡಿಗೇರಿಸಿಕೊಂಡರು. ಈ ಸಂದರ್ಭದಲ್ಲಿ ಮತಾನಾಡಿದ ಸ್ಪರ್ಧೆಯ ಪ್ರಾಯೋಜಕರೂ ಹಿಸ್ನಾ ಇಂಟರ್ ನ್ಯಾಶನಲ್ ಯುಎಇ ಇದರ ನಿರ್ದೆಶಕರೂ ಆದ ರೊನಾಲ್ಡ್ ಪಿಂಟೊ ’ ದಾಯ್ಜಿವರ್ಲ್ಡ್ ಸಂಸ್ಥೆಯ ಸಹಯೋಗದಲ್ಲಿ ಸೌಂದರ್ಯ ಸ್ಪರ್ಧೆಯೊಂದನ್ನ ನಡೆಸುವುದರಲ್ಲಿ ವಿಶೇಷ ಹೆಮ್ಮೆಯಿದೆ.
ಮಹಿಳೆಯರನ್ನ ಪ್ರೋತ್ಸಾಹಿಸಿದರೆ ಅದು ಮುಂದಿನ ಇಡೀ ಜನಾಂಗವನ್ನೇ ಪ್ರೋತ್ಸಾಹಿಸಿದಂತೆ. ಈ ಅಂತಿಮ ಸುತ್ತು ಎಲ್ಲಾ ಸ್ಪರ್ಧಿಗಳ ಸೌಂದರ್ಯ ಲೋಕದಲ್ಲಿ ಮಿಂಚುವ ಕನಸುಗಳಿಗೆ ಗರಿಕಟ್ಟಲು ಪ್ರೋತ್ಸಾಹಿಸಲಿದೆ. ಧೈರ್ಯ, ಬುದ್ಧಿವಂತಿಕೆ ಹಾಗೂ ನಾಯಕತ್ವ ಗುಣವುಳ್ಳ ಮಹಿಳೆಯರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಹಿಸ್ನಾ ಇಂಟರ್ ನ್ಯಾಶನಲ್ ಹಿ ಸೌಂದರ್ಯ ಸ್ಪರ್ಧೆಯನ್ನು ಅಯೋಜಿಸುತ್ತಿದೆ ’ ಎಂದು ತಿಳಿಸಿದರು.
ರೊನಾಲ್ಡ್ ಪಿಂಟೊ ಜೊತೆ ಪತ್ನಿ ದೊರೊತಿ ಪಿಂಟೊ, ಅನಿವಾಸಿ ಉದ್ಯಮಿ ರೊನಾಲ್ಡ್ ಕೊಲಾಸೊ , ಪತ್ನಿ ಜೀನ್ ಕೊಲಾಸೊ, ದಾಯ್ಜಿವರ್ಲ್ಡ್ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆ , ನಿರ್ದೇಶಕಾರ ಮೆಲ್ವಿನ್ ರೊಡ್ರಿಗಸ್, ಅಲೆಕ್ಸಿಸ್ ಕಾಸ್ತೆಲಿನೋ, 2015ರ ವಿಜೇತೆ ಜೆಸ್ಸಿಕಾ ಫೆರ್ನಾಂಡಿಸ್ ವಿಜೇತರಿಗೆ ಪ್ರಶಸ್ತಿ ಕಿರೀಟ ಹಾಗೂ ಫೈನಲಿಸ್ಟ್ ಗಳಿಗೆ ವಿವಿಧ ಟೈಟಲ್ಗಳನ್ನು ನೀಡಿ ಗೌರವಿಸಿದರು.
ವಿಜೇತೆ ಶಿಖಾ ಸುಶೀಲ್ ಕಿರೀಟದೊಂದಿಗೆ ಮೂರು ಲಕ್ಷ ನಗದು ಬಹುಮಾನವಾಗಿ ಪಡೆದುಕೊಂಡರೆ, ಸೆರೆನಾ ಹಾಗೂ ಫೆ ಮಾರ್ಟಿಸ್ ರನ್ನರ್ ಅಪ್ ಕಿರೀಟದೊಂದಿಗೆ ತಲಾ ಎರಡು ಹಾಗೂ ಒಂದು ಲಕ್ಷ ನಗದನ್ನು ಪಡೆದುಕೊಂಡರು. ಇತರ ಫೈನಲಿಸ್ಟ್ ಗಳು ಟೈಟಲ್ಗಳ ಜೊತೆ ತಲಾ ಇಪ್ಪತ್ತೈದು ಸಾವಿರ ನಗದನ್ನ ಪಡೆದುಕೊಂಡರು.