ಮಂಗಳೂರು, ಫೆ. 15 (DaijiworldNews/AK): ದಾಯ್ದಿವರ್ಲ್ಡ್ ಡಾಟ್ ಕಾಮ್'ನ ಬೆಳ್ಳಿ ಹಬ್ಬದ ಸಂಭ್ರಮ ಫೆ.14ರಂದು ಮಿಲಾಗ್ರಿಸ್ ಸಭಾಂಗಣದಲ್ಲಿ ನಡೆಯಿತು.


























ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಉದ್ಯಮಿ ರೊನಾಲ್ಡ್ ಕೊಲಾಸೊ ಅವರು ಮಾತನಾಡಿ, ಮಾಧ್ಯಮಗಳು ಸಮಾಜದಲ್ಲಿ ಸಾಮರಸ್ಯ, ಸೌಹಾರ್ದತೆ ಬೆಳೆಸಲು ಒತ್ತು ನೀಡಬೇಕು. ಮಾಧ್ಯಮಗಳಲ್ಲಿ ಸುದ್ದಿಗಳು ಎಷ್ಟಿದೆ, ಎಷ್ಟು ವೇಗವಾಗಿ ಪ್ರಕಟವಾಗಿದೆ ಎನ್ನುವುದಕ್ಕಿಂತ ವರದಿಗಳು ಎಷ್ಟು ಪಾರದರ್ಶಕವಾಗಿದೆ ಎನ್ನುವುದು ಮುಖ್ಯ ಎಂದರು.
ದಾಯ್ದಿವರ್ಲ್ಡ್ ಸಂಸ್ಥೆ ಕೇವಲ ಸುದ್ದಿಗೆ ಮಾತ್ರವಲ್ಲದೆ ಸಮಾಜಮುಖಿ ಕಾರ್ಯಗಳಲ್ಲೂ ಗುರುತಿಸಿಕೊಂಡಿದೆ. 2001ರಲ್ಲಿ ದಾಯಿವರ್ಲ್ಡ್ ಡಾಟ್ ಕಾಮ್ ಅನ್ನು ನಾನು ಉದ್ಘಾಟಿಸಿದ್ದೆ ಹಲವು ಕಷ್ಟದ ದಿನಗಳನ್ನು ದಾಟಿ ಇಂದು 25ರ ಸಂಭ್ರಮಕ್ಕೆ ತಲುಪಿದ್ದು ವಿಶ್ವದ ನಂಬಿಕಸ್ತ ಸುದ್ದಿ ಮನೆಯಾಗಿ ಬೆಳೆದಿದೆ. ಕೋಟ್ಯಂತರ ಜನರಿಗೆ ಹಾಗೂ ಹೊಸ ಓದುಗರನ್ನು ಕೂಡ ದಾಯ್ಜಿವರ್ಲ್ಡ್ ತಲುಪಿದೆ ಎಂದರು.
ಬೆಂಗಳೂರು ಎಂಆರ್ಜಿ ಗ್ರೂಪ್ ನ ಚೇರ್ಮನ್ ಡಾ| ಕೆ. ಪ್ರಕಾಶ್ ಶೆಟ್ಟಿ ಮಾತನಾಡಿ, 25 ವರ್ಷದ ಸಾಧನೆ ಸುಲಭವಲ್ಲ, ಅದರ ಹಿಂದೆ ಅವರ ಪ್ರಯತ್ನ, ಶ್ರಮ, ದುಡಿಮೆ ಅಪಾರ ಜಿಲ್ಲೆಯಲ್ಲಿ ಸಾವಿರಾರು ಎಂಜಿನಿಯರ್, ವೈದ್ಯರನ್ನು ನಾವು ತಯಾರಿಸುತ್ತಿದ್ದೇವೆ. ಆದರೆ ನಮ್ಮಲ್ಲಿ ಉದ್ಯೋಗದ ಕೊರತೆ ಇದೆ. ನಮ್ಮಲ್ಲಿಯೇ ನಮ್ಮವರಿಗೆ ಉದ್ಯೋಗ ಸೃಷ್ಟಿಯ ಬಗ್ಗೆ ಚಿಂತಿಸುವ ಅಗತ್ಯವಿದೆ ಎಂದರು.
ಯೇನಪೊಯ ವಿವಿಯ ಚಾನ್ಸಲರ್ಡಾ। ಯೇನಪೊಯ ಅಬ್ದುಲ್ಲ ಕುಂನ್ನಿ ಮಾತನಾಡಿ, ದಾಯಿವರ್ಲ್ಡ್ ಡಾಟ್ ಕಾಮ್ ತನ್ನ ಅತ್ಯುತ್ತಮ ಸೇವೆಯನ್ನು ಸುದ್ದಿಯ ಮೂಲಕ ನೀಡುತ್ತಿದೆ ಎಂದರು. ಯುಎಇ ಹಿಸ್ನಾ ಇಂಟರ್ನ್ಯಾಶನಲ್ ನ ಆಡಳಿತ ನಿರ್ದೇಶಕ ರೊನಾಲ್ಡ್ ಪಿಂಟೊ, ರೋಹನ್ ಕಾರ್ಪೊರೇಶನ್ ನಚೇರ್ಮನ್ ರೋಹನ್ ಮೊಂತೆರೊ ಶುಭ ಹಾರೈಸಿದರು.
ದಾಯಿವರ್ಲ್ಡ್ ಡಾಟ್ ಕಾಮ್ ನ ನಿರ್ದೇಶಕ ವಾಲ್ಟರ್ನಂದಳಿಕೆ ಪ್ರಸ್ತಾವಿಸಿ, ಸ್ವಾಗತಿಸಿದರು. ಮೆಲ್ವಿನ್ ರೊಡ್ರಿಗಸ್ ವಂದಿಸಿದರು. ನಿರ್ದೇಶಕ ಅಲೆಕ್ಸಿಸ್ ಕ್ಯಾಸ್ತಲಿನೊ, ಪಾಲುದಾರರಾದ ನೆಲ್ಸನ್ ರೊಡ್ರಿಗಸ್, ಲೀನಾ ವಿಕ್ಟರ್ಡಿ'ಸೋಜಾ, ಮೈಕಲ್ ಕ್ಯಾಸ್ತಲಿನೊ, ಡಯನ್ ಡಿ'ಸೋಜಾ, ರೊನಾಲ್ಡ್ ನಝತ್, ಸ್ಟೀಫನ್ ಮಸ್ಕರೇನಸ್ ಉಪಸ್ಥಿತರಿದ್ದರು.