ಮಂಗಳೂರು, ಫೆ. 12 (DaijiworldNews/TA): ಕೂಳೂರು ಫಲ್ಗುಣಿ ನದಿಯ ಹಿನ್ನೀರು ಆಗಿರುವ ಕೂಳೂರು, ರಾಯಿಕಟ್ಟೆ ಹಳ್ಳದಲ್ಲಿ ನೀರು ಮಲಿನಗೊಂಡು ದುರ್ವಾಸನೆ ಬೀರುತ್ತಿದ್ದು, ಮೀನು, ಏಡಿ ಸಹಿತ ಜಲಚರಗಳು ಸತ್ತು ತೇಲುತ್ತಿವೆ. ಇದರಿಂದಾಗಿ ದಟ್ಟ ಜನವಸತಿ ಇರುವ ಸುತ್ತಲ ಪ್ರದೇಶದಲ್ಲಿ ಅಸಹನೀಯ ಸ್ಥಿತಿ ನಿರ್ಮಾಣಗೊಂಡಿದೆ. ಕಳೆದ ಒಂದು ವಾರದಿಂದ ಗ್ರಾಮಸ್ಥರು ಈ ಕುರಿತು ದೂರುತ್ತಿದ್ದರೂ ಯಾವುದೇ ನಿರ್ಣಾಯಕ ಕ್ರಮಗಳು ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.



ಇನ್ನು ಈ ಬಗ್ಗೆ ಸಂಬಂಧಪಟ್ಟ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ದ.ಕ ಜಿಲ್ಲಾಧಿಕಾರಿ ಎಚ್.ವಿ ದರ್ಶನ್ ರವರಿಗೆ ಮನವಿ ಸಲ್ಲಿಸಲಾಯಿತು. ನಿಯೋಗ ದಲ್ಲಿ ಕೂಳೂರು ಸಂತ ಅಂತೋಣಿ ದೇವಾಲಯದ ಧರ್ಮ ಗುರುಗಳಾದ ವಂದನೀಯ ವಿಜಯ್ ವಿಕ್ಟರ್ ಲೋಬೋ, ಮ.ನ.ಪಾ ನಿಕಟ ಪೂರ್ವ ಸದಸ್ಯರಾದ ಅನಿಲ್ ಕುಮಾರ್,ರೆಹಮಾನ್ ಖಾನ್ ಕುಂಜತ್ತಬೈಲ್,ಐವನ್ ಡಿಸೋಜ,ಡ್ಯಾನಿ ಡಿಸೋಜ, ವೆಲೀರಿಯನ್ ಲೋಬೋ,ಜೆಸಿಂತ ಡಿಸೋಜ,ಮ್ಯಾಕ್ಸಿಮ್ ಡಿಸೋಜ, ಮನ್ಸೂರ್ ಅಲಿ, ಪ್ರಮೀಳಾ,ರೋವಿನ್,ವೀರಾ ಡಿಸೋಜ ಮುಂತಾದವರು ಉಪಸ್ಥಿತರಿದ್ದರು.