ಮಂಗಳೂರು, ಫೆ. 11 (DaijiworldNews/TA): ಬಜ್ಪೆ ಎಡಪದವಿನ ಮುಚ್ಚೂರು ಕ್ರಾಸ್ ಸಮೀಪ ಭಾರೀ ವಾಹನಗಳ ನಿರಂತರ ಸಂಚಾರದಿಂದ ರಸ್ತೆ ಕುಸಿತ ಹಾಗೂ ಬಿರುಕುಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫೆಬ್ರವರಿ 12ರಿಂದ ಮಾರ್ಚ್ 13ರವರೆಗೆ ಮಂಗಳೂರು-ಮೂಡುಬಿದಿರೆ ಹೆದ್ದಾರಿಯಲ್ಲಿ ತುರ್ತು ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಿದೆ.

ದುರಸ್ತಿ ಕಾರ್ಯವು 30 ದಿನಗಳ ಕಾಲ ನಡೆಯಲಿದ್ದು, ಸಾರ್ವಜನಿಕರ ಸುರಕ್ಷತೆ ಮತ್ತು ಕಾಮಗಾರಿಯ ಸುಗಮ ಪ್ರಗತಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಂಗಳೂರು ನಗರ ಪೊಲೀಸ್ ಆಯುಕ್ತರು ತಾತ್ಕಾಲಿಕ ಸಂಚಾರ ಬದಲಾವಣೆಗಳ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ.
ಭಾರೀ ವಾಹನಗಳಿಗೆ ಪರ್ಯಾಯ ಮಾರ್ಗ :
ಮೂಡುಬಿದಿರೆಯಿಂದ ಮಂಗಳೂರಿಗೆ ಬರುವ ಲಾರಿಗಳು/ಭಾರೀ ವಾಹನಗಳು: ಮೂಡುಬಿದಿರೆಯಿಂದ ವಿದ್ಯಾಗಿರಿ ಮೂಲ್ಕಿ ಕ್ರಾಸ್ನಲ್ಲಿ ಬಲ ತಿರುವು ಪಡೆದು, ಕಿನ್ನಿಗೋಳಿ ಮೂಲಕ ಸಂಚರಿಸಿ, ಪಕ್ಷಿಕೆರೆ ಕ್ರಾಸ್ನಲ್ಲಿ ಬಲಕ್ಕೆ ತಿರುಗಿ, ಮೂಲ್ಕಿ ಜಂಕ್ಷನ್-ಸುರತ್ಕಲ್ ಮಾರ್ಗವಾಗಿ ಮಂಗಳೂರು ತಲುಪಬೇಕು. ಮಂಗಳೂರಿನಿಂದ ಮೂಡುಬಿದಿರೆಗೆ ತೆರಳುವ ಲಾರಿಗಳು: ಮೇಲಿನ ಮಾರ್ಗದ ಹಿಮ್ಮುಖ ದಾರಿಯನ್ನು ಅನುಸರಿಸಬೇಕು.
ಲಘು ಮೋಟಾರು ವಾಹನಗಳಿಗೆ ಮಾರ್ಗ:
ಮೂಡುಬಿದಿರೆಯಿಂದ ಮಂಗಳೂರಿಗೆ : ವಿದ್ಯಾಗಿರಿ ಮೂಲ್ಕಿ ಕ್ರಾಸ್ನಲ್ಲಿ ಬಲಕ್ಕೆ ತಿರುಗಿ, ಕಿನ್ನಿಗೋಳಿ–ಮುರುಕಾವೇರಿ–ಕಾಟಿ–ಪೆರ್ಮುದೆ–ಬಜ್ಪೆ ಮಾರ್ಗವಾಗಿ ಅಥವಾ ಪಕ್ಷಿಕೆರೆ ಕ್ರಾಸ್ನಲ್ಲಿ ಎಡಕ್ಕೆ ತಿರುಗಿ ಹಳೆಯಂಗಡಿ–ಸುರತ್ಕಲ್ ಮೂಲಕ ಸಾಗಬಹುದು. ಮಂಗಳೂರಿನಿಂದ ಮೂಡುಬಿದಿರೆಗೆ : ಈ ಮಾರ್ಗವೇ ಅನ್ವಯಿಸುತ್ತದೆ.
ಬಸ್ಸುಗಳು ಮತ್ತು ಸ್ಥಳೀಯ ವಾಹನಗಳಿಗೆ: ಮೂಡುಬಿದಿರೆಯಿಂದ ಬರುವ ರೂಟ್ ಬಸ್ಸುಗಳು ಹಾಗೂ ಸ್ಥಳೀಯ ಲಘು ವಾಹನಗಳು ದಡ್ಡಿ ಕ್ರಾಸ್ನಲ್ಲಿ ಬಲಕ್ಕೆ ತಿರುಗಿ, ಪುಮಾರ್ ಪದವಿ–ಮಂಜನಕಟ್ಟೆ ಕ್ರಾಸ್–ಅರ್ಜುನಕೋಡಿ–ಈಶ್ವರಕಟ್ಟೆ ಕ್ರಾಸ್ ಮೂಲಕ ಸಾಗಿದು, ಮುಚ್ಚೂರು ಕ್ರಾಸ್ನಲ್ಲಿ ಬಲಕ್ಕೆ ತಿರುಗಿ ಕೈಕಂಬ–ಗುರುಪುರ ಮಾರ್ಗವಾಗಿ ಮಂಗಳೂರಿಗೆ ತಲುಪಬಹುದು.
ಮಂಗಳೂರಿನಿಂದ ಕಾರ್ಕಳ/ಮೂಡುಬಿದಿರೆ ಕಡೆಗೆ ಟ್ರಕ್ಗಳು : ಮಂಗಳೂರಿನಿಂದ ಕಾರ್ಕಳ ಅಥವಾ ಮೂಡುಬಿದಿರೆ ಕಡೆಗೆ ತೆರಳುವ ಎಲ್ಲಾ ಟ್ರಕ್ಗಳು ಸುರತ್ಕಲ್–ಮುಲ್ಕಿ–ಪಡುಬಿದ್ರಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 66 (NH-66) ಬಳಸುವಂತೆ ಸೂಚಿಸಲಾಗಿದೆ.