ಮಂಗಳೂರು, ಫೆ. 10 (DaijiworldNews/AK): ಕಳೆದ ಬುಧವಾರ ನಂತೂರು ಬಸ್ ನಿಲ್ದಾಣದ ಬಳಿ ಸ್ಕೂಟರ್ಗೆ ಡಿಕ್ಕಿ ಹೊಡೆದು ಸಹ ಸವಾರೆ ಸಾವಿಗೆ ಕಾರಣವಾದ ಸಿಟಿ ಬಸ್ ಮತ್ತೆ ಸೋಮವಾರ ಗುರುಪುರ ಕೈಕಂಬದಲ್ಲಿ ಬೈಕ್ಗೆ ಡಿಕ್ಕಿ ಹೊಡೆದಿದೆ.

ಸೋಮವಾರ ಮಧ್ಯಾಹ್ನ, ಬಸ್ ವಾಮಂಜೂರು ಮೂಲಕ ಕೈಕಂಬ ಕಡೆಗೆ ಹೋಗುತ್ತಿದ್ದಾಗ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮವಾಗಿ, ಬೈಕ್ ಚಲಿಸುವ ಬಸ್ಸಿನ ಕೆಳಗೆ ಬಿದ್ದಿದೆ. ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೂದಲೆಳೆಯ ಅಂತರದಲ್ಲಿ ಗಂಭೀರ ಗಾಯಗಳಿಂದ ಪಾರಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ.
ಕಳೆದ ಬುಧವಾರ ನಂತೂರಿನಲ್ಲಿ ಸ್ಕೂಟರ್ ಡಿಕ್ಕಿ ಹೊಡೆದ ಚಾಲಕ ಸೋಮವಾರ ಬಸ್ ಚಲಾಯಿಸುತ್ತಿರಲಿಲ್ಲ. ನಂತೂರು ಘಟನೆಯ ನಂತರ, ಆ ಚಾಲಕನನ್ನು ಬಂಧಿಸಲಾಗಿತ್ತು.
ಸೋಮವಾರ ಸಂಜೆ ನಗರದ ಕೊಟ್ಟಾರ ಚೌಕಿ ಬಳಿ ವರದಿಯಾದ ಮತ್ತೊಂದು ಘಟನೆಯಲ್ಲಿ, ಟೈರ್ ಪಂಕ್ಚರ್ ಆದ ಖಾಸಗಿ ಎಕ್ಸ್ಪ್ರೆಸ್ ಬಸ್ ಅನ್ನು ನಿರ್ಲಕ್ಷ್ಯದಿಂದ ಚಲಾಯಿಸಲಾಗಿದೆ ಎಂದು ಆರೋಪಿಸಲಾಗಿದೆ, ಇದರಿಂದಾಗಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗಳು ಅಪಾಯದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
ಸಾರ್ವಜನಿಕರು ಬಸ್ಸನ್ನು ಅಡ್ಡ ಹಾಕಿದ್ದರೆ, ಮತ್ತು ಸಂಚಾರ ಪೊಲೀಸರು ಚಾಲಕನನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಬಸ್ಸಿನ ಕೆಳಗೆ ನೀವು ಬಿದ್ದಿಲ್ಲ ತಾನೇ ಎಂದು ಚಾಲಕ ಉಡಾಫೆ ಉತ್ತರ ನೀಡಿದ್ದಾನೆ. ಸಂಚಾರ ಪೊಲೀಸರು ಅವನ ನಡವಳಿಕೆಯನ್ನು ಗಮನಿಸಿದ ದಂಡ ವಿಧಿಸಿದ್ದಾರೆ.