ಮಂಗಳೂರು, ,ಫೆ. 09 (DaijiworldNews/ AK):ಆಶ್ರಯ ಆಂಗನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಫ್ಯಾಶನ್ ವಿಥೌಟ್ ಬ್ಯಾರಿಯರ್ಕಾ ರ್ಯಕ್ರಮವು ವಿಶೇಷ ಅಗತ್ಯಗಳನ್ನು ಹೊಂದಿರುವ ಮಕ್ಕಳ ಪ್ರತಿಭೆ ಮತ್ತು ಆತ್ಮವಿಶ್ವಾಸವನ್ನು ಸಮಾಜದ ಮುಂದೆ ಅನಾವರಣಗೊಳಿಸಿತು. ಈ ಕಾರ್ಯಕ್ರಮವು ಫೆ 8 ರಂದು ಕರ್ನಾಟಕ ಬ್ಯಾಂಕ್ ಕಾರ್ಮಿಕರ ಯೂನಿಯನ್ ಹಾಲ್ನಲ್ಲಿ ಯಶಸ್ವಿಯಾಗಿ ನಡೆಯಿತು.














ಈ ಸಂದರ್ಭದಲ್ಲಿ ಮಾತನಾಡಿದ ಆಶ್ರಯ ಆಂಗನ್ ನ ವ್ಯವಸ್ಥಾಪಕ ಟ್ರಸ್ಟಿಆಶಾ ಕುಮಾರಸ್ವಾಮಿ, “ಆಶ್ರಯ ಆಂಗನ್ ಒಂದು ಸಂಸ್ಥೆಯಷ್ಟೇ ಅಲ್ಲ; ಇದು ವಿಶೇಷ ಮಕ್ಕಳಿಗಾಗಿ ನಿರ್ಮಿತವಾದ ಸುರಕ್ಷಿತ, ಆತ್ಮೀಯ ಹಾಗೂ ಸ್ವೀಕಾರದ ಜಾಗ. ಥೆರಪಿ, ಶಿಕ್ಷಣ, ಯೋಗ, ವರ್ತನೆ ಮಾರ್ಗದರ್ಶನ ಮತ್ತು ಪೋಷಕರ ಸಹಕಾರದ ಮೂಲಕ ಮಗುವಿನ ಸಮಗ್ರ ಬೆಳವಣಿಗೆಯೇ ನಮ್ಮ ಮುಖ್ಯ ಉದ್ದೇಶ” ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿ ಅವರು, ಯೋಗವು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಹೇಳಿ, ಆಶ್ರಯ ಆಂಗನ್ ದ ಸೇವಾ ಕಾರ್ಯಗಳಿಗೆ ಶುಭ ಹಾರೈಸಿದರು.
ಮತ್ತೊಬ್ಬ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ನಿತಿನ್ ಶೆಟ್ಟಿ ಅವರು ಆಶ್ರಯ ಆಂಗಣದ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಸೈಂಟ್ ಮೇರಿ ಸ್ಪೆಷಲ್ ಸ್ಕೂಲ್ ಕಿನ್ನಿಗೋಳಿ ಮತ್ತು ಕ್ರಿಸ್ತಾರಾಜ್ ನವಚೇತನ ಪ್ರಶಸ್ತಿ ಸ್ಪೆಷಲ್ ಸ್ಕೂಲ್ ವೇಣೂರು ಶಾಲೆಗಳ ವಿಶೇಷ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಮನ ಗೆದ್ದರು. ಅವರ ಪ್ರದರ್ಶನಗಳು ಕಾರ್ಯಕ್ರಮಕ್ಕೆ ವೈವಿಧ್ಯತೆಯನ್ನು ತುಂಬಿ, ವಿಶೇಷ ಮಕ್ಕಳಲ್ಲಿರುವ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿತು.
ಈ ಸಂದರ್ಭದಲ್ಲಿ ಆಶ್ರಯ ಆಂಗನ್ ಪಬ್ಲಿಕ್ ಸ್ಪೀಕಿಂಗ್ ಮತ್ತು ವಿಶೇಷ ಮಕ್ಕಳು ಹಾಗೂ ನಗರದ ವಿವಿಧ ಶಾಲೆಗಳ ಮಕ್ಕಳು ಮತ್ತು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು, ಕಾರ್ಯಕ್ರಮಕ್ಕೆ ಮೆರುಗು ತಂದರು.