ಸುಳ್ಯ, ಫೆ. 07 (DaijiworldNews/TA): ಕಳೆದ ಸುಮಾರು 6 - 7 ತಿಂಗಳಿಂದ, ಸುಳ್ಯದ ಅಡ್ತಲೆ ಬೆದ್ರುಪಣೆ ಪ್ರದೇಶದಲ್ಲಿ ನಿರಂತರ ಆನೆ ದಾಳಿ ನಡೆಸುತ್ತಿದ್ದು ಈ ಭಾಗದ ಎಲ್ಲಾ ಜನರ ಕೃಷಿ ನಾಶ ಆಗಿದೆ.


ಹೀಗೆ ಮುಂದುವರಿದಲ್ಲಿ ಜನರು ಊರು ಬಿಡುವ ಸಮಯ ದೂರವಿಲ್ಲ ಎಂದು ಈ ಭಾಗದ ರೈತರು ಆತಂಕ ವ್ಯಕ್ತ ಪಡಿಸಿದ್ದಾರೆ. ಅಡಿಕೆ ಹಳದಿ ರೋಗದಿಂದ ತತ್ತರಿಸಿ ಉಪ ಕೃಷಿಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿರುವ ಕೃಷಿಕರು, ಆನೆ ಹಾಗೂ ಕಾಡು ಕೋಣಗಳ ನಿರಂತರ ದಾಳಿಯಿಂದ ಹೈರಾಣರಾಗಿದ್ದಾರೆ.
ಅಲ್ಲದೆ ಅಡ್ತಲೆ ಎಲಿಮಲೆ ರಸ್ತೆಯ ಮಧ್ಯದಲ್ಲಿಯೇ ಸಂಜೆ 6 ಗಂಟೆಗೆ ಕಾಣಿಸಿಕೊಳ್ಳುತ್ತಿದ್ದು, ವಾಹನ ಸವಾರರು ಭಯ ಬೀತರಾಗಿ ಸಂಚಾರ ಮಾಡುತ್ತಿದ್ದಾರೆ. ಅರಣ್ಯ ಇಲಾಖೆ ಹಾಗೂ ಜನಪ್ರತಿನಿದಿನಗಳು ತಕ್ಷಣ ಸ್ಪಂದಿಸಿ ಇದಕ್ಕೊಂದು ಶಾಶ್ವತ ಪರಿಹಾರ ಮಾಡದೇ ಇದ್ದಲ್ಲಿ, ಸಂಘ ಸಂಸ್ಥೆಗಳ ಮುಂದಾಳತ್ವದಲ್ಲಿ ಈ ಊರಿನ ನೊಂದ ಕೃಷಿಕರಿಂದ ಪ್ರತಿಭಟನೆ ನಡೆಯಲಿದೆ ಎಂದು ರೈತರು ತಿಳಿಸಿದ್ದಾರೆ.