ಸುಳ್ಯ, ಫೆ. 03 (DaijiworldNews/TA): ತೊಡಿಕಾನ ಮಲ್ಲಿಕಾರ್ಜುನ ದೇವರ ಪಟ್ಟದ ದೈವ -ಸೀಮೆ ದೈವ ರಾಜನ್ ದೈವ ( ಶಿರಾಡಿ ಭೂತ) ಪರಿವಾರ ದೈವಗಳ ಕೋಲ ಚಾಕಟೆಡಿ ನೇಮ ನಡೆಯಿತು. ಬೆಳಿಗ್ಗೆ ಮಲೆ ಉಳ್ಳಾಕುಲು ನೇಮ ನಡೆಯಿತು.

ಬಳಿಕ ರಾಜನ್ ದೈವ ( ಶಿರಾಡಿ ಭೂತ) ದ ಕೋಲ ನಡೆದು ಬಟ್ಟಿಭೂತ, ಪುರುಷ ಭೂತ, ಕರಿ ಭೂತ, ಮಲೆ ಮುದ್ದ, ಶೆಟ್ಟಿ ಭೂತ ಮತ್ತು ಅಂಗಾರ ದೈವಗಳ ಕೋಲ ನಡೆಯಿತು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಸದಸ್ಯರು,ಮಾಜಿ ಅಧ್ಯಕ್ಷರು ಸದಸ್ಯರು,ಜೀರ್ಣೋದ್ಧಾರ ಸಮಿತಿಯವರು ನೂರಾರು ಭಕ್ತರು ಉಪಸ್ಥಿತರಿದ್ದು ದೈವಗಳ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.