ಬಂಟ್ವಾಳ, ಜ. 28(DaijiworldNews/TA): ಆಡಳಿತ ಸೌಧದ ಕಚೇರಿ ಮುಂಭಾಗದಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ.) ಕರ್ನಾಟಕ ಕೇರಳ,ಕೊರಗ ಅಭಿವೃದ್ಧಿ ಸಂಘ ಬಂಟ್ವಾಳ ತಾಲೂಕು ಇವರ ಜಂಟಿ ಆಶ್ರಯದಲ್ಲಿ ಕೃಷಿ ಭೂಮಿ ಮಂಜೂರಾತಿ, ಹಾಗೂ ಕೊರಗ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಮಂಜೂರಾತಿ ನೀಡುವಂತೆ ಒತ್ತಾಯಿಸಿ ನಡೆಯುತ್ತಿದ್ದ ಆಹೋರಾತ್ರಿ ನಿರಂತರ ಧರಣಿ ಸತ್ಯಾಗ್ರಹ ಕೊನೆಗೂ ಅಂತ್ಯ ಕಂಡಿದೆ.


ಬಂಟ್ವಾಳ ತಹಶಿಲ್ದಾರ್ ಮಂಜುನಾಥ್ ಅವರು ಸಂಜೆ ವೇಳೆ ಬೇಟಿ ನೀಡಿ ಕೊರಗ ಸಮುದಾಯದ ಹೋರಾಟಗಾರರ ಮನವಿ ಸ್ವೀಕರಿಸಿದರು. ಜಿಲ್ಲಾಧಿಕಾರಿ ಅವರ ಜೊತೆಗೆ ನಿಮ್ಮ ಬೇಡಿಕೆಗಳನ್ನು ಪೂರೈಸಲು ಚರ್ಚಿಸಿ ಕ್ರಮವನ್ನು ಮುಂದಿನ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆದರೆ ಸಮುದಾಯದ ಬೇಡಿಕೆಗಳನ್ನು ದಾಖಲೆ ಸಹಿತ ಕಚೇರಿಗೆ ಖುದ್ದಾಗಿ ನೀಡುವಂತೆ ತಿಳಿಸಿದ ಅವರು ಹೋರಾಟಗಾರರ ಸಂಘದ ಪ್ರಮುಖರು ಈ ಬಗ್ಗೆ ಹೆಚ್ಚಿನ ನಿಗಾವಹಿಸಿ ಕೆಲಸವನ್ನು ಮಾಡಿಸಿಕೊಳ್ಳಿ ಎಂದು ಅವರು ತಿಳಿಸಿದರು.
ಬೇಡಿಕೆಯನ್ನು ಆಲಿಸಿ ತಾವು ಶೀಘ್ರವಾಗಿ ಸಮಸ್ಯೆಗೆ ಸ್ಪಂದಿಸದಿದ್ದರೆ ಫೆ.27 ರಂದು ಮತ್ತೆ ದೊಡ್ಡ ಮಟ್ಟದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ನವೀನ್ ,ಜಿಲ್ಲಾ ಸಂಯೋಜಕ ಪುತ್ರ ಕೆ, ತಾಲೂಕು ಅಧ್ಯಕ್ಷ ರಮೇಶ್, ಮಹಿಳಾ ಅಧ್ಯಕ್ಷೆ ಲಲಿತಾ ,ಕಾರ್ಯದರ್ಶಿ ಶೀನಾ,ಪುತ್ತೂರು ಸಂಘದ ಸದಸ್ಯ ಬಾಬು, ಹಾಗೂ ಸದಸ್ಯರುಗಳು ಹಾಜರಿದ್ದರು.