ಮಂಗಳೂರು, ಜ. 28(DaijiworldNews/TA): ಮಂಗಳೂರಿನ ಅಂಡರ್ ಗ್ರೌಂಡ್ ಡ್ರೈನೇಜ್ ಬಹಳ ವರ್ಷಗಳ ಹಿಂದೆಯೇ ಮಾಡಿರುವುದರಿಂದ ಸದ್ಯ ದುರಸ್ಥಿಗೆ ಒಳಪಡುವ ಸ್ಥಿತಿಯಲ್ಲಿದೆ ಎಂದು ದ.ಕ ಜಿಲ್ಲಾಧಿಕಾರಿ ದರ್ಶನ್ ಎಚ್ ವಿ ತಿಳಿಸಿದರು.

ಮಂಗಳೂರಿನಲ್ಲಿ ಸಾರ್ವಜನಿಕರ ಜೊತೆ ನೇರ ಫೋನ್ ಇನ್ ನ ಬಳಿಕ ಪ್ರತಿಕ್ರಿಯೆ ನೀಡಿದರು. ಹಿಂದೆ ಲ್ಯಾಟರೈನ್ ಸ್ಟೋನ್ ನಿಂದ ಇವುಗಳನ್ನು ಮಾಡಿರುವುದರಿಂದ ಸದ್ಯ ಇವುಗಳು ಕ್ರಮೇಣ ಹಾಳಾಗುತ್ತಾ ಬಂದಿದೆ.
ಸದ್ಯ ಹೊಸದಾಗಿ ಇಡೀ ಮಂಗಳೂರಿಗೆ ಯುಜಿಡಿ ಹೊಸ ಯೋಜನೆ ಉದ್ದೇಶಿಸಲಾಗಿದ್ದು, ಸುಮಾರು 1200 ಕೋಟಿ ರೂ. ವೆಚ್ಚ ತಗುಗಲಿದೆ. ಒಂದು ಬಾರಿ ಸಂಪೂರ್ಣ ಯೋಜನೆಯ ಡಿಪಿಆರ್ ತಯಾರಾದ ಮೇಲೆ ಯೋಜನೆಯ ಸಂಪೂರ್ಣ ವೆಚ್ಚ ಗೊತ್ತಾಗಲಿದೆ ಎಂದು ಡಿಸಿ ತಿಳಿಸಿದರು.