ಮಂಗಳೂರು, ಜ. 28(DaijiworldNews/TA): ಮಹಾನಗರ ಪಾಲಿಕೆಯ ಎಲ್ಲಾ ವಾರ್ಡ್ ಗಳಿಗೆ ನೀರು ಪೂರೈಸುವ ಜಲಸಿರಿ ಯೋಜನೆ ಬಗ್ಗೆ ದ.ಕ ಡಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವೊಂದು ಕಡೆಗಳಲ್ಲಿ ಅನಧಿಕೃತ ಹಾಗೂ ಸರಿಯಾದ ಯೋಜನೆಗಳಿಲ್ಲದೆ ಅಪಾರ್ಟ್ ಮೆಂಟ್ ಗಳನ್ನು ನಿರ್ಮಿಸಲಾಗಿರುತ್ತದೆ.

ಈ ಭಾಗಗಳಲ್ಲಿ ಪೈಪ್ ಲೈನ್ ಹಾಕುವಲ್ಲಿ ಸಮಸ್ಯೆ ಇದೆ. ಹಾಗಾಗಿ ಜಲಸಿರಿ ಯೋಜನೆ ಈ ರೀತಿಯ ಭಾಗಕ್ಕೆ ತಲುಪುವಲ್ಲಿ ಕೊಂಚ ಸಮಸ್ಯೆ ಇದೆ. ಇದರಿಂದ ಯೋಜನೆಯು ಎಲ್ಲಾ ನೂರು ಪ್ರತಿಶತ ಮನೆಗಳಿಗೆ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಸರಿಯಾದ ರೀತಿಯಲ್ಲಿ ಲೇಔಟ್ ಮಾಡಿಸಿ ಎಂದು ನಾವು ಸೂಚಿಸುತ್ತಿದ್ದೇವೆ. ಜಲಸಿರಿ ಯೋಜನೆ ಸಂಬಂಧಿಸಿದಂತೆ ಹಲವು ದೂರುಗಳು ಬಂದಿವೆ ಎಂದು ಡಿಸಿ ತಿಳಿಸಿದರು.