ಕೊಟ್ಟಾಯಂ, ಜ. 28 (DaijiworldNews/AK ): ಕೇರಳದ ಕೊಟ್ಟಾಯಂನಲ್ಲಿ ಬುಧವಾರ ನಡೆದ ಕಾರು ಅಪಘಾತದಲ್ಲಿ ಸುರತ್ಕಲ್ನ ಕಾನಾದ ಯುವಕನೊಬ್ಬ ಸಾವನ್ನಪ್ಪಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ.

ಮೃತ ವ್ಯಕ್ತಿಯನ್ನು ಮುಲ್ಕಿ ತಾಲ್ಲೂಕಿನ ಅಂಗರಗುಡ್ಡೆ ಮೂಲದ ಶಾನವಾಜ್ ಅಲಿಯಾಸ್ ಶಮೀಮ್ (26) ಎಂದು ಗುರುತಿಸಲಾಗಿದ್ದು, ಪ್ರಸ್ತುತ ಕಾನಾದ ಚಿರಾಗ್ ಫ್ಲಾಟ್ಸ್ನಲ್ಲಿ ವಾಸಿಸುತ್ತಿದ್ದರು.
ಅಪಘಾತದಲ್ಲಿ ಗಾಯಗೊಂಡವರಲ್ಲಿ ಕಾಟಿಪಳ್ಳದ ಸಿರಾಜ್, ಕಾನಾದ ಅಶ್ಫಾಕ್, ಸೂರಿಂಜೆಯ ಶಬ್ಬೀರ್ ಮತ್ತು ಕಾರು ಚಲಾಯಿಸುತ್ತಿದ್ದ ರಾಜಸ್ಥಾನದ ಒಬ್ಬ ವ್ಯಕ್ತಿ ಸೇರಿದ್ದಾರೆ. ಗಾಯಾಳುಗಳಲ್ಲಿ ಸಿರಾಜ್ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಶಮೀಮ್ ಮತ್ತು ಇತರ ನಾಲ್ವರು ಕೊಟ್ಟಾಯಂನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕಾಗಿ ಬೌನ್ಸರ್ಗಳಾಗಿ ಹೋಗಿದ್ದರು ಎಂದು ತಿಳಿದುಬಂದಿದೆ. ಬುಧವಾರ ಬೆಳಿಗ್ಗೆ, ಅವರು ಉಪಾಹಾರ ಸೇವಿಸಲು ಪಟ್ಟಣದ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಅಪಘಾತ ಸಂಭವಿಸಿದೆ. ಕಿರಿದಾದ ರಸ್ತೆಯಲ್ಲಿ ಕಾರು ನಿಯಂತ್ರಣ ತಪ್ಪಿ ಸುಮಾರು 20 ಅಡಿ ಆಳದ ಕಂದಕಕ್ಕೆ ಉರುಳಿದೆ ಎಂದು ವರದಿಯಾಗಿದೆ.
ತೀವ್ರವಾಗಿ ಗಾಯಗೊಂಡ ಶಾನವಾಜ್ ಸ್ಥಳದಲ್ಲೇ ಸಾವನ್ನಪ್ಪಿದರು. ಸಿರಾಜ್ಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಮಂಗಳೂರಿಗೆ ಕರೆತರಲಾಗಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೂರಿಂಜೆಯ ಶಬ್ಬೀರ್ ಮತ್ತು ಕಾನಾದ ಅಶ್ಫಾಕ್ ಚಿಕಿತ್ಸೆ ಪಡೆದು ನಂತರ ಆಸ್ಪತ್ರೆಯಿಂದ ಬಿಡುಗಡೆಗೊಂಡರು. ರಾಜಸ್ಥಾನ ಮೂಲದ ಕಾರು ಚಾಲಕ ಪ್ರಾಣಾಪ್ರಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.