ಬಂಟ್ವಾಳ, ಜ. 26 (DaijiworldNews/TA): ಸಜಿಪ ಮೂಡ ವಲಯ ಕಾಂಗ್ರೆಸಿನ ವತಿಯಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಹೆಸರು, ಮೂಲ ಸ್ವರೂಪ ಬದಲಾವಣೆ ಮಾಡಿದ ವಿರುದ್ಧ ವಲಯ ಅಧ್ಯಕ್ಷ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆಯವರ ಅಧ್ಯಕ್ಷತೆಯಲ್ಲಿ ಪ್ರತಿಭಟನೆ ನಡೆಯಿತು.



ಪ್ರತಿಭಟನೆಯು ಕಂದೂರು ಬಸ್ ತಂಗುದಾಣದಿಂದ ಕಾಲುನಡಿಗೆ ಪ್ರಾರಂಭಗೊಂಡು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಕೊಡುವುದರ ಮೂಲಕ ಸಮಾಪನಗೊಂಡಿತು. ಪ್ರತಿಭಟನೆಯನ್ನು ಉದ್ದೇಸಿ ಬಂಟ್ವಾಳ ಕೆಡಿಪಿ ಸದಸ್ಯರಾದ ಗಿರೀಶ್ ಕುಮಾರ್ ಪೆರ್ವ ಮಾತನಾಡಿದರು.
ಪ್ರತಿಭಟನೆಯಲ್ಲಿ ಬಂಟ್ವಾಳ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್,ತಾಲೂಕು ಮಾಜಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ತಾಲೂಕು ಮಾಜಿ ಸದಸ್ಯರಾದ, ಶ್ರೀಮತಿ ಪುಷ್ಪವಾತಿ ಮಾಜಿ ಸದಸ್ಯರಾದ ಸಂಜೀವ ಪೂಜಾರಿ ಕುಚ್ಚಿ ಗುಡ್ಡೆ, ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶೋಭ ಶೆಟ್ಟಿ ಹಾಗೂ ಪಕ್ಷದ ಕಾರ್ಯಕರ್ತರು,ಮುಖಂಡರು ಉಪಸ್ಥಿತರಿದ್ದರು.