ಮಂಗಳೂರು, ಜ. 26 (DaijiworldNews/TA): ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸ ಎದುರುಪದವು ಮೂಡುಶೆಡ್ಡೆ ಇದರ ವತಿಯಿಂದ 77 ನೇ ಗಣರಾಜ್ಯೋತ್ಸವ ಸಮಾರಂಭ ಅದ್ಧೂರಿಯಾಗಿ ನೆರವೇರಿತು.




ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸದ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ AP, ಖತೀಬರಾದ ಸಫ್ವಾನ್ ಇರ್ಫಾನಿ ಮುಂಡೋಳೆ ಇತರ ಗಣ್ಯರು ಸೇರಿ ಧ್ವಜಾರೋಹಣ ನಡೆಸಿದರು.
ಕಾರ್ಯಕ್ರಮದಲ್ಲಿ ಮಸೀದಿ ಉಪಾಧ್ಯಕ್ಷ ಅಬ್ದುಲ್ ರಝಕ್ AR, ಮುಅಲ್ಲಿಂ ಜಾಬೀರ್ ಜೌಹರಿ ಕಲ್ಲಡ್ಕ, ಹಿರಿಯರಾದ ಹಾಜಿ ಹನೀಫ್ ಮೌಲವಿ, ಮಾಜಿ ಉಪಾಧ್ಯಕ್ಷ MD ಜಬ್ಬಾರ್, ಮಾಜಿ ಸದಸ್ಯರಾದ ಅಬ್ದುಲ್ ರಝಕ್ ಮಂದಾರ, ಸಾಹುಲ್ ಹಮೀದ್, ಶೇಕ್ ಅಬ್ದುಲ್ ಖಾದರ್, ಸದಸ್ಯರಾದ ಅತಾವುಲ್ಲಾ, ಶಾಕೀರ್, ಮನ್ಸೂರ್, ಹನೀಫ್ ಕಲಾಯಿ, ಅಬ್ದುಲ್ ರಝಕ್ ಸ್ಕೈ ಮತ್ತಿತರರು ಉಪಸ್ಥಿತರಿದ್ದರು.