ಮಂಗಳೂರು, ಜ. 25 (DaijiworldNews/TA): ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ ವತಿಯಿಂದ ಕರ್ನಾಟಕ ರಾಜ್ಯ ಮಹಿಳಾ ಜಾನಪದ ಕ್ರೀಡೋತ್ಸವ-ಸಾಂಸ್ಕೃತಿಕ ಸಮ್ಮೇಳನ-ಮಹಿಳಾ ವೈಭವ 2026 ವು ಮಂಗಳೂರಿನಲ್ಲಿ ಫೆ. 1, 2ರಂದು ನಡೆಯಲಿದೆ ಎಂದು ಮಂಗಳೂರು ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷೆ ಚಂಚಲಾ ತೇಜೋಮಯ ಹೇಳಿದರು.

ಮಂಗಳೂರಿನಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. 4 ದಶಕಗಳ ಸಾಧಕ ಕಾರ್ಯಕ್ರಮಗಳ ಮೂಲಕ ಯಶಸ್ಸಿನ ಪಥದತ್ತ ಸಾಗುತ್ತಿರುವ ಮಹಿಳಾ ಒಕ್ಕೂಟವು ಮುಂದಿನ ಹೆಜ್ಜೆಯಾಗಿ ಮಹಿಳಾ ಸಶಕ್ತಿಕರಣಕ್ಕಾಗಿ ರಾಜ್ಯದ 31 ಜಿಲ್ಲೆಗಳ ಮಹಿಳೆಯರನ್ನು ಒಗ್ಗೂಡಿಸಿ ಫೆ. 1 ರಂದು ಬೆಳಗ್ಗೆ 8.30ಕ್ಕೆ ಬಲ್ಮಠದ ಯುಬಿಎಂಸಿ ಮೈದಾನ (ಶಾಂತಿ ನಿಲಯ)ದಿಂದ ನೆಹರೂ ಮೈದಾನದ ತನಕ ವೈವಿಧ್ಯಮಯ ವೇಷ ಭೂಷಣಗಳಿಂದ ಅಲಂಕೃತ ಮಹಿಳಾ ಜಾಥಾ ಹೊರಡಲಿದೆ.
ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಾಂಸ್ಕೃತಿಕ ಸಮ್ಮೇಳನ ಅಂಗವಾಗಿ ಸಮೇಳನ ಸ್ಪರ್ಧೆ, ವಿಚಾರಗೋಷ್ಠಿ, ಮಹಿಳೆಯರು ತಯಾರಿಸಿದ ವಸ್ತು ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.