ಉಡುಪಿ, ಜ. 25 (DaijiworldNews/TA): ಜಿಲ್ಲೆಯ ಬ್ರಹ್ಮಾವರದಲ್ಲಿ ಸರ್ವೀಸ್ ರಸ್ತೆ ಕಾಮಗಾರಿ ಮಾತ್ರ ಮಂದಗತಿಯಲ್ಲಿ ಸಾಗುತ್ತಿದ್ದು, ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದೆ ಇಲ್ಲಿ ಹಲವು ತಿಂಗಳ ಹಿಂದೆ ಹಲವು ಅಪಘಾತಗಳು ನಡೆದಿತ್ತು.

ಇಲ್ಲಿನ ಜನ ಸರ್ವೀಸ್ ರಸ್ತೆ ಅತ್ಯಗತ್ಯ ಎಂದು ಪಟ್ಟು ಹಿಡಿದು ಪ್ರತಿಭಟನೆಯನ್ನು ನಡೆಸಿದರು. ಸಂಸದರ ಬಳಿ ಮನವಿ ಕೊಟ್ಟಿದ್ದು, ಸಂಸದರು ಕೂಡ ಸರ್ವಿಸ್ ರಸ್ತೆ ಬೇಕೆ ಬೇಕೆಂದೂ ಪಟ್ಟು ಹಿಡಿದರು, ಅದರೆ 2025 ರ ಒಳಗಡೆ ಸರ್ವೀಸ್ ರಸ್ತೆ ಕಾಮಗಾರಿ ಸಂಪೂರ್ಣವಾಗಬೇಕಿತ್ತು ಆದರೆ ಇಂದಿಗೂ ಕೂಡ ಸರ್ವೀಸ್ ರಸ್ತೆ ಕಾಮಗಾರಿ ಮಾತ್ರ ಮಂದಗತಿಯಲ್ಲಿ ಸಾಗುತ್ತಿದೆ. ಬಸ್ ನಿಲ್ದಾಣಗಳಿಲ್ಲ,,ಶಾಲಾ ವಿದ್ಯಾರ್ಥಿಗಳಿಗೆ ವಾಹನ ಸವಾರರಿಗೂ ತೊಂದರೆ, ರಸ್ತೆ ದಾಟುವಾಗ ಆಯಾ ತಪ್ಪಿದರೂ ಅಪಘಾತ ಸಂಭವಿಸುವ ಸಾಧ್ಯತೆ ಇದೆ.
ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಳೆ ಜನರಿಗೆ ನಿಲ್ಲಲು ಇಲ್ಲಿ ಬಸ್ ನಿಲ್ದಾಣಗಳಿತ್ತು. ಆದರೆ ಈವಾಗ ಬಸ್ ನಿಲ್ದಾಣವನ್ನೇ ಇಲ್ಲವನ್ನಾಗಿಸಿ ಜನರು ಬಿಸಿಲಲ್ಲಿ ಮತ್ತು ಧೂಳು ನುಂಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲೆ ಹತ್ತಿರ ಖಾಸಗಿ ಶಾಲಾ ಸಂಸ್ಥೆಗಳಿದ್ದು ಶಾಲಾ ವಿದ್ಯಾರ್ಥಿಗಳು ರಸ್ತೆ ದಾಟುವ ವೇಳೆ ಎಚ್ಚರದಿಂದ ರಸ್ತೆ ದಾಟಬೇಕಾದ ಸಂದರ್ಭ ಎದುರಾಗಿದೆ.
ರಸ್ತೆ ದಾಟುವ ವೇಳೆ ಕೊಂಚ ಎಡವಿದ್ರೂ ಅಪಘಾತ ಮಾತ್ರ ವಿದ್ಯಾರ್ಥಿಗಳಿಗೆ ಕಟ್ಟಿಟ್ಟ ಬುತ್ತಿ. ಸ್ಥಳಿಯ ಅಂಗಡಿಗಳು ,ಹೋಟೆಲ್ ಎಲ್ಲವೂ ಧೂಳಿನ ವಾತವರಣದಿಂದ ಕೂಡಿದ್ದು ಮಳೆಗಾಲ ಮುನ್ನ ಸರ್ವೀಸ್ ರಸ್ತೆ ಕಾಮಗಾರಿ ಬೇಗ ಮುಗಿಯಲಿ ಶಾಲಾ ವಿದ್ಯಾರ್ಥಿಗಳಿಗು, ಸ್ಥಳಿಯರಿಗೂ ತೊಂದರೆಯಾಗದಿರುವುದು ಎಂಬುದು ಇಲ್ಲಿನ ಸ್ಥಳಿಯರ ಆಗ್ರಹ ಕೂಡ ಆಗಿದೆ. ಇನ್ನು ಈ ಬಗ್ಗೆ ಸ್ಥಳಿಯರು ಹಾಗೂ ಬ್ರಹ್ಮಾವರ ಫೌಂಡೆಶನ್ ಟ್ರಸ್ಟಿ ಗೋವಿಂದರಾಜ್ ಹೆಗ್ಡೆ ಹೆಚ್ಚಿನ ಮಾಹಿತಿ ನೀಡಿದ್ದಾರೆ.