ಮಂಗಳೂರು,ಜ. 16 (DaijiworldNews/AK):ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಪ್ಲೋಟ್ ಅವರು ಮಂಗಳೂರಿನ ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯದ ಎಲ್ಸಿಆರ್ಐ (LCRI) ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ನೂತನ ಶಾಲೆಗಳನ್ನು ಉದ್ಘಾಟಿಸಿದರು.



ಈ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಗೌರವ ಅತಿಥಿಗಳಾಗಿ ಭಾಗವಹಿಸಿದರು. ಮಂಗಳೂರು ಜೆಸುಯಿಟ್ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರು ಹಾಗೂ ಸಂತ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ಅದ ಮೆಲ್ವಿನ್ ಜೆ. ಪಿಂಟೊ ಎಸ್.ಜೆ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ| ಪ್ರವೀಣ್ ಮಾರ್ಟಿಸ್ ಎಸ್.ಜೆ. ಮತ್ತು ಮ ರಿಜಿಸ್ಟ್ರಾರ್ ಡಾ| ರೊನಾಲ್ಡ್ ನಜರೆತ್ ಅವರು ಉಪಸ್ಥಿತರಿದ್ದರು. ಮುಖ್ಯ ಅತಿಥಿಯಾಗಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭಾಗವಹಿಸಿ ಮಾತನಾಡಿ ಪ್ರಧಾನಿಯವರು start up ಮಾಡಿ ಇಂದಿಗೆ ಹತ್ತು ವರುಷ ಅಯಿತು. ಈ ಸಮಯದಲ್ಲೇ ಅಲೋಶಿಯಸ್ ಕಾಲೇಜಿನಲ್ಲಿ ಎರಡು ಶಾಲೆಗಳ ಉದ್ಘಾಟನೆಯನ್ನು ರಾಜ್ಯಪಾಲರು ನೆರವೇರಿಸುವ ಮೂಲಕ ,start-up ಅರಂಭವಾಗಿದೆ.
ಮಾಜಿ ರಕ್ಷಣಾ ಸಚಿವ ಜಾರ್ಜ್ ಪೆರ್ನಾಂಡಿಸ್ ರವರು ಕೂಡಾ ಇದೇ ಕಾಲೇಜನಿಂದ ಬಂದವರು ಅವರನ್ನು ನಾವು ನೆಪಿಸಬೇಕಾಗಿದೆ. ಎಜುಕೇಷನ್ ಹಬ್ ಅಗಿರುವ ಕರಾವಳಿ ಕರ್ನಾಟಕವನ್ನ ಅಭಿವೃದ್ಧಿ ಮಾಡಿಸುವಲ್ಲಿ ನಾವೆಲ್ಲರೂ ಯಶಸ್ವಿ ಯಾಗೋಣ. ಭಾರತ ವಿಕಸಿತದತ್ತ ಸಾಗುವ ದಿಕ್ಕಿನಲ್ಲಿ ಕೇಂದ್ರ ಸರಕಾರದ ಯೋಜನೆಯನ್ನು ತಾವೂ ಕೂಡಾ ಶಿಕ್ಷಣ ಕ್ಷೇತ್ರದಲ್ಲಿ ಕೈ ಜೋಡಿಸಿಕೊಂಡು ಅಭಿವೃದ್ಧಿ ಕಡೆ ಎಂದವರು ತಿಳಿಸಿದರು.
ಉದ್ಘಾಟನಾ ನೆರವೇರಿಸಿ ರಾಜ್ಯಪಾಲರು ಮಾತನಾಡಿ ಅಲೋಶಿಯಸ್ ಕಾಲೇಜಿನಲ್ಲಿ ನಿರ್ಮಾಣವಾದ ಎಂಜಿನಿಯರಿಂಗ್ ಮತ್ತು ಕಾನೂನಿ ಶಿಕ್ಷಣ ಸಂಸ್ಥೆಗಳನ್ನು ಪ್ರೀತಿಯಿಂದ ಉದ್ಘಾಟಿಸಿದ್ದೇನೆ. ಡಿಜಿಟಲ್ ಇಂಡಿಯಾ ಅತ್ಮ ನಿರ್ಭಾರ ಭಾರತ ದಡಿಯಲ್ಲಿ ಶಿಕ್ಷಣ ಇಂದು ಬೆಳೆಯುತ್ತಿದೆ. ನಾವಿಂದು ವಿಕಸಿತ ಭಾರತದತ್ತ ಸಾಗುತ್ತಿದ್ದೇವೆ. ಪ್ರಧಾನಿಗಳ ಕನಸಿನ ಶಿಕ್ಷಣ ಪಥ ಇಂದು ಸಾಕಾರಗೊಳ್ಳುತ್ತಿದೆ.ವ್ಯಕ್ತಿ ನಿರ್ಮಾಣದಲ್ಲಿ ಶಿಕ್ಷಣ ಬಹುಮುಖ್ಯ. ಸ್ವಾಮಿ ವಿವೇಕಾನಂದರ ಅದರ್ಶ ತತ್ವಗಳನ್ನು ಪಾಲಿಸಬೇಕು. ಪ್ರಾಚೀನ ಶಿಕ್ಷ ಣ ಸಂಸ್ಥೆ ನಲಂದಾಗಳನ್ನು ನೆನಪಿಸುತ್ತೇನೆ. ಕರ್ನಾಟಕ ರಾಜ್ಯದಲ್ಲಿ 146 ವರುಷಗಳಿಂದ ಶಿಕ್ಷಣ ಕೊಡುತ್ತಿರುವ ಕರಾವಳಿ ಕರ್ನಾಟಕದ ಅಲೋಶಿಯಸ್ ಶಿಕ್ಷಣ ಸಂಸ್ಥೆಯ ಕೊಡುಗೆ ಪ್ರಶಂಸನೀಯ ಎಂದರು.
146 ವರ್ಷಗಳ ಜ್ಞಾನದ ದೀವಿಗೆ ಕರಾವಳಿ ಕರ್ನಾಟಕದ ಶೈಕ್ಷಣಿಕ ಭೂಪಟದಲ್ಲಿ ತನ್ನದೇ ಆಗ ಅಚ್ಚಳಿಯದ ಮುದ್ರೆಯೊತ್ತಿರುವ ಮಂಗಳೂರಿನ ಪ್ರತಿಷ್ಠಿತ ಸಂತ ಆಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಇಂದು ತನ್ನ ಇತಿಹಾಸದ ಅತ್ಯಂತ ಪ್ರಮುಖ ಮೈಲಿಗಲ್ಲಿನತ್ತ ಸಾಗಿದೆ. 146 ವರ್ಷಗಳ ಸುದೀರ್ಘ ಪರಂಪರೆಯನ್ನು ಹೊಂದಿದೆ ಹೆಮ್ಮರವಾಗಿ ಬೆಳೆಯುತ್ತದೆ ಎಂಬುದು ಒಂದು ಅದ್ಭುತ ಪಯಣ, ಕೇವಲ ಒಂದು ಚಿಕ್ಕ ಕಾಲೇಜಾಗಿ ಆರಂಭವಾದ ಈ ಸಂಸ್ಥೆ, ಇಂದು 'ಪರಿಗಣಿತ ವಿಶ್ವವಿದ್ಯಾನಿಲಯ'ವಾಗಿ Deemed to be University) ಮೇಲ್ದರ್ಜೆಗೇರಿದ ನಂತರ ತನ್ನ ಶೈಕ್ಷಣಿಕ ಹರಹನ್ನು ಮತ್ತಷ್ಟು ವಿಸ್ತರಿಸಿದೆ.
ಈ ವಿಶ್ವವಿದ್ಯಾನಿಲಯದ ಆವರಣದಲ್ಲಿ ನೂತನ 'ಸ್ಕೂಲ್ ಆಫ್ ಎಂಜಿನಿಯರಿಂಗ್' ಮತ್ತು 'ಸ್ಕೂಲ್ ಆಫ್ ಲಾ' (ಕಾನೂನು ಶಾಲೆ) ವಿಭಾಗಗಳನ್ನು ಲೋಕಾರ್ಪಣೆ ಮಾಡಲಾಯಿತು.