ಮಂಗಳೂರು, ಜ. 13 (DaijiworldNews/TA): ನಗರದ ಬೋಂದೆಲ್ ಬಳಿ ಖಾಸಗಿ ಬಸ್ ಪಾದಾಚಾರಿ ಮಹಿಳೆಗೆ ಢಿಕ್ಕಿ ಹೊಡೆದ ಘಟನೆ ನಡೆದಿದೆ. ಅಪಘಾತಕ್ಕೆ ಅತಿವೇಗದ ಚಾಲನೆಯೇ ಕಾರಣ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ಧಾರೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.



ಮಹಿಳೆಯೊಬ್ಬರು ರಸ್ತೆದಾಟುತ್ತಿದ್ದ ವೇಳೆ ಅತಿವೇಗದಲ್ಲಿ ಬಂದಂತಹ ಬಸ್, ನಿಯಂತ್ರಣಕ್ಕೆ ಬಾರದೆ ಢಿಕ್ಕಿಹೊಡೆದಿದೆ. ಢಿಕ್ಕಿ ಪರಿಣಾಮ ಬಸ್ನ ಗಾಜುಗಳು ಪುಡಿಪುಡಿಯಾಗಿದೆ. ಮಹಿಳೆಯೂ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ದಿನಂಪ್ರತಿ ಖಾಸಗಿ ಬಸ್ಗಳ ಅತಿವೇಗದ ಚಾಲನೆಯು ಸಾರ್ವಜನಿಕರಿಗೆ ನಿರಂತರ ಚಿಂತೆಗೆ ಒಳಗಾಗಿದೆ. ಬೋಂದೆಲ್ ಏರ್ಪೋರ್ಟ್ ರೋಡ್ನಲ್ಲಿ ಘಟನೆ ನಡೆದಿದ್ದು, ಈ ಪ್ರದೇಶದಲ್ಲಿ ಶಾಲೆ, ಚರ್ಚ್ ಖಾಸಗಿ ಸಂಸ್ಥೆಗಳು ಇದ್ದು ದಿನನಿತ್ಯ ಅನೇಕರು ಇಲ್ಲಿ ಓಡಾಡುತ್ತಿರುತ್ತಾರೆ. ಶಾಲಾವಾತಾವರಣ ಆದ ಕಾರಣ ಖಾಸಾಗಿ ಬಸ್ಗಳ ಹಾರಾಟದ ಚಾಲನೆ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂಬ ಕೂಗು ಕೂಡ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.