ಮಂಗಳೂರು, ಜ. 05 (DaijiworldNews/AK):ಭಾನುವಾರ ಸಂಜೆ ತಣ್ಣೀರುಬಾವಿ ಬೀಚ್ನಲ್ಲಿ ನಡೆದ ಕರಾವಳಿ ಉತ್ಸವದ ಸಂದರ್ಭದಲ್ಲಿ ಜನಪ್ರಿಯ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ಅವರು ಸಂಗೀತ ಗಾನ ಸಂಭ್ರಮ ಮೂಲಕ ನೆರೆದ ಜನರನ್ನು ರೋಮಾಂಚನಗೊಳಿಸಿದರು.







ಕಾರ್ಯಕ್ರಮದಲ್ಲಿ ಸಂಗೀತ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೇರ ಪ್ರದರ್ಶನ ವೀಕ್ಷಿಸಲು ಜಮಾಯಿಸಿದ್ದರಿಂದ ಬೀಚ್ ಪ್ರದೇಶ ಅಭೂತಪೂರ್ವ ಪ್ರತಿಕ್ರಿಯೆಗೆ ಸಾಕ್ಷಿಯಾಯಿತು. ವಿಜಯ್ ಪ್ರಕಾಶ್ ಅಭೂತಪೂರ್ವ ಗಾಯನವು ಪ್ರೇಕ್ಷರನ್ನು ಮೋಡಿ ಮಾಡಿ ಚಪ್ಪಳೆಯ ಸುರಿಮಳೆಗೈದರು.
ಗಾಯಕ ಪ್ರಸಿದ್ಧ ಹಾಡುಗಳನ್ನು ವೇದಿಕೆ ಮೇಲೆ ಹಾಡುತ್ತಾ ಇದ್ದಾರೆ, ಇತ್ತ ಜನಸಮೂಹವು ಸಂತೋಷದಿಂದ ನೃತ್ಯ ಮಾಡುತ್ತಾ, ಕೈ ಬೀಸುತ್ತಾ ಮತ್ತು ಪ್ರತಿ ಕ್ಷಣವನ್ನು ಆನಂದಿಸುತ್ತಾ ಕಂಡುಬಂದಿತು. ಪ್ರೇಕ್ಷಕರಿಂದ ಬಂದ ಉತ್ಸಾಹಭರಿತ ಪ್ರತಿಕ್ರಿಯೆಯು ಇನ್ನು ಉತ್ಸಾಹವನ್ನು ಹೆಚ್ಚಿಸಿತು ಮತ್ತು ಸಂಜೆಯನ್ನು ಒಂದು ರೋಮಾಂಚಕ ಸಂಗೀತಲೋಕದಲ್ಲಿ ತೇಲಾಡುವಂತೆ ಮಾಡಿತ್ತು.
ಈ ಪ್ರದರ್ಶನವು ನಡೆಯುತ್ತಿರುವ ಕರಾವಳಿ ಉತ್ಸವದ ಅತ್ಯಂತ ಸ್ಮರಣೀಯ ಸಂಜೆಗಳಲ್ಲಿ ಒಂದಾಗಿದೆ ಎಂದು ಕಂಡು ಬಂತು. ಇದು ಸಂದರ್ಶಕರಿಗೆ ಸಂತೋಷದ ನೆನಪುಗಳನ್ನು ನೀಡುತ್ತದೆ ಮತ್ತು ಹಬ್ಬದ ಉತ್ಸಾಹವನ್ನು ಮತ್ತಷ್ಟು ಬಲಪಡಿಸಿತ್ತು.