ಮಂಗಳೂರು, ಜ. 04 (DaijiworldNews/TA): ಕಂಬಳದಲ್ಲಿ ತೀವ್ರ ಚರ್ಚೆಗೆ ಈಡಾಗಿದ್ದ ಘಟನೆ ಇದೀಗ ಸುಕಾಂತ್ಯ ಕಂಡಿದೆ. ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ರಾಜ್ಯಸಮಿತಿಯ ಕಂಬಳ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ, ಹಿರಿಯ ತೀರ್ಪುಗಾರರಾದ ಗುಣಪಾಲ್ ಕಡಂಬ, ಹಿರಿಯ ಕಂಬಳ ಸಲಹೆಗರಾರದ ಕೊಳಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿಯವರ ಸಮ್ಮುಖದಲ್ಲಿ ಮಾತುಕತೆ ನಡೆದಿದೆ.

ಮಂಗಳೂರು ಕಂಬಳದಲ್ಲಿ ಪರಸ್ಪರ ಮಾತಿನ ಚಕಮಕಿಯಲ್ಲಿ ತೊಡಗಿದ ಲೋಕೇಶ್ ಶೆಟ್ಟಿ ಮುಚ್ಚುರು ಮತ್ತು ಅರುಣ್ ಶೆಟ್ಟಿ ಗಂದಬೆಟ್ಟು ಇವರ ನಡುವೆ ನಡೆದ ಘಟನೆಯನ್ನು ವಿವಿಧ ಕಂಬಳ ಸಮಿತಿಯ ಹಿರಿಯರ ನೇತೃತ್ವದಲ್ಲಿ ಘಟನೆಯನ್ನು ಬಹಳ ಸೌಹಾರ್ದತೆಯಲ್ಲಿ ಸುಕಾಂತ್ಯ ಮಾಡಲಾಗಿದೆ. ಎಲ್ಲಾ ಕಂಬಳಾಭಿಮಾನಿಗಳು ಹಾಗು ಕೋಣದ ಯಜಮಾನಾರು ಮತ್ತು ಓಟಗಾರರು, ನಾವೆಲ್ಲ ಒಂದೇ, ಕಂಬಳದ ಗೌರವವನ್ನು ಉಳಿಸೋಣ, ನಮ್ಮ ಕಂಬಳ ನನ ದುಂಬುಲ ಎಂದು ಈ ಸಂದರ್ಭ ಜೊತೆಯಾದರು.