ಮಂಗಳೂರು, ಜ. 04 (DaijiworldNews/TA): ಬಿಕರ್ನಕಟ್ಟೆಯ ಕಾರ್ಮೆಲ್ ಹಿಲ್ ನಲ್ಲಿರುವ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವವು ಜನವರಿ 14 ಹಾಗೂ 15 ರಂದು ಅದ್ದೂರಿಯಾಗಿನಡೆಯಲಿದೆ. ಇದರ ಅಂಗವಾಗಿ ಮಹೋತ್ಸವದ ಹೊರೆಕಾಣಿಕೆಯು ಜ.3ರಂದು ಕುಲಶೇಖರದ ಹೋಲಿಕ್ರಾಸ್ ಚರ್ಚ್ ನಿಂದ ಆರಂಭಗೊಂಡಿತು.

ಹೊರೆಕಾಣಿಕೆಯ ಅಂತಿಮಭಾಗದಲ್ಲಿ ಸಹಬಾಳ್ವೆ ಎನ್ನುವ ವಿಶೇಷ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿತ್ತು. ಆನಂತರ ಸಂತ ಅಲೋಶಿಯಸ್ ವಿಶ್ವ ವಿದ್ಯಾಲಯದ ಉಪಕುಲಪತಿ ವಂ। ಡಾ| ಪ್ರವೀಣ್ ಮಾರ್ಟಿಸ್ ಧ್ವಜಾರೋಹಣವನ್ನು ಮಾಡಿದರು. ಕೋರ್ಡೆಲ್ ಚರ್ಚ್ ನ ಸಹಾಯಕ ಗುರು ವಂ. ಗುರು ವಿಜಯ್ ಮೊಂತೆರೋ ಆಶೀರ್ವಚನ ನೀಡಿದರು. ಕೊರ್ಡೆಲ್ ಚರ್ಚ್ ನ ಉಪಾಧ್ಯಕ್ಷರಾಗಿರುವ ರೂತ್ ಧ್ವಜ ಹಾರಿಸಿ ಕಾರ್ಯಕ್ರಮವನ್ನು , ಉದ್ಘಾಟಿಸಿದರು.
ಈ ಸಂದರ್ಭ ಕಾರ್ಮೆಲ್ ಮಠದ ಮಠಾಧೀಶ ವಂ. ಗುರು ಮೆಲ್ವಿನ್ ಡಿಕುನ್ಹಾ, ಬಾಲ ಯೇಸುವಿನ ಪುಣ್ಯಕ್ಷೇತ್ರದ ವ್ಯವಸ್ಥಾಪಕ ವಂ. ಗುರು ಸ್ಟೀವನ್ ಪಿರೇರಾ, ಕಾರ್ಪೊರೇಟರ್ ಭಾಸ್ಕರ ಮೊಯ್ಲಿ, ಹಾಗೂ ಇನ್ನಿತರ ಪೂಜ್ಯ ಗುರುಗಳು, ಧರ್ಮ ಭಗಿನಿಯರು ಉಪಸ್ಥಿತರಿದ್ದರು.