ಮಂಗಳೂರು, ಜ.01 (DaijiworldNews/TA): ಶಿವಮೊಗ್ಗದ ಶಿರಳಕೊಪ್ಪದಲ್ಲಿ ಎಸ್.ಜೆ.ಫ್ಯಾಷನ್ ದಿವಾ ಸ್ಟಾರ್ ಸಂಸ್ಥೆ ಆಯೋಜಿಸಿದ್ದ ಪ್ಯಾಶನ್ ಶೋ ಐಕಾನ್ ಆಫ್ ಇಂಡಿಯಾ 2025 ರಲ್ಲಿ ಪೊಲೀಸ್ ಲೈನ್ ಪಾಂಡೇಶ್ವರ ಮಂಗಳೂರಿನ ಶೌರ್ಯಾ ಎಂ. ಚಂದ್ರ ರವರು ಸಬ್ ಜೂನಿಯರ್ ಕಿಡ್ ವಿಭಾಗದಲ್ಲಿ ಐಕಾನ್ ಆಫ್ ಇಂಡಿಯಾ ಆಗಿ ವಿನ್ನರ್ ಆಗಿದ್ದಾರೆ.



ಇವರು ಮಂಗಳೂರು ಶಾರದಾ ವಿದ್ಯಾಲಯ ಕೊಡಿಯಾಲ್ ಬೈಲ್ ನ ಯು.ಕೆ.ಜಿ ವಿದ್ಯಾರ್ಥಿ ಹಾಗೂ ಪಾತ್ವೇ ಮಾಡೆಲಿಂಗ್ ಬಲ್ಲಾಲ್ಬಾಗ್ನ ವಿದ್ಯಾರ್ಥಿ ಆಗಿದ್ದಾರೆ. ಇವರು ಮುಖೇಶ್ ಚಂದ್ರ ಹಾಗೂ ಅಖಿಲ.ಕೆ ರವರ ದ್ವಿತೀಯ ಸುಪುತ್ರ ಆಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಆಯೋಜಕರಾದ ಶಿವಕುಮಾರ್ ಹಾಗೂ ರಮಾ ರವರು ಭಾಗವಹಿಸಿದ್ದಾರೆ.