ಮಂಗಳೂರು, ಡಿ. 29 (DaijiworldNews/TA): ಕರಿಮಣಿ ಸರ ಕಸಿದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಂಚಾಡಿ ಕೊಪ್ಪಳಕಾಡು ಎಂಬಲ್ಲಿ ಡಿ. 25ರಂದು ಸಂಜೆ ಕೊಂಚಾಡಿ ಗುರುನಗರದ ರತ್ನಾವತಿ ಅವರ ಕುತ್ತಿಗೆಯಿಂದ 32 ಗ್ರಾಂ ತೂಕದ ಕರಿಮಣಿ ಸರ ಕಸಿದು ಪರಾರಿಯಾಗಿದ್ದ ಆರೋಪಿ ಬಂಟ್ವಾಳ ಮೂಲದ ರೋಹಿತ್ (25) ಎಂಬಾತನನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಿಸಿ ಕೆಮರಾ ದೃಶ್ಯಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ರವಿವಾರ ಬೆಳಗ್ಗೆ ಬಂಧಿಸಿದ್ದಾರೆ. ಬಂಧಿತನಿಂದ ಕಳವು ಮಾಡಲಾದ ಸರ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ.