ಸುಳ್ಯ, ಡಿ. 28 (DaijiworldNews/TA): ನಗರದ ಗಾಂಧಿನಗರದಿಂದ ಆಲೆಟ್ಟಿಯತ್ತ ಸಾಗುವ ರಸ್ತೆಯ ಗುರುಂಪು ಎಂಬಲ್ಲಿ ರಸ್ತೆಯಲ್ಲಿದ್ದ ಗುಂಡಿಯನ್ನು ತಪ್ಪಿಸುವ ಯತ್ನದಲ್ಲಿ ಅಟೋ ರಿಕ್ಷಾವೊಂದು ರಸ್ತೆ ಬದಿಯ ಚರಂಡಿಗೆ ಮಗುಚಿ ಬಿದ್ದ ಘಟನೆ ಡಿ.27ರ ಶನಿವಾರ ಸಂಭವಿಸಿದೆ.

ನಾಗಪಟ್ಟಣ ಕಡೆಗೆ ಸಂಚರಿಸುತ್ತಿದ್ದ ರಿಕ್ಷಾವು ರಸ್ತೆ ಮಧ್ಯೆ ಇರುವ ಗುಂಡಿಯನ್ನು ತಪ್ಪಿಸಲು ಯತ್ನಿಸುತ್ತಿದ್ದಾಗ ಎದುರಿನಿಂದ ಬೈಕೊಂದು ಬಲಬದಿಗೆ ಬರುವುದನ್ನು ಗಮನಿಸಿದ ಚಾಲಕ ಆನಂದ ಅವರು ರಿಕ್ಷಾವನ್ನು ಚಾಲಕ ಎಡಬದಿಗೆ ತಿರುಗಿಸಿದಾಗ ನಿಯಂತ್ರಣ ಕಳೆದುಕೊಂಡು ಚರಂಡಿಗೆ ಮಗುಚಿತು. ರಿಕ್ಷಾದಲ್ಲಿದ್ದ ಮಹಿಳೆಗೆ ಗಾಯವಾಗಿದ್ದು ಚಿಕಿತ್ಸೆ ನೀಡಲಾಗಿದೆ. ಆನಂದ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ರಿಕ್ಷಾ ಜಖಂಗೊಂಡಿದೆ.