ಬಂಟ್ವಾಳ, ಡಿ. 28 (DaijiworldNews/TA): ಬಂಟ್ವಾಳ ಹಾಗೂ ಉಳ್ಳಾಲ ತಾಲೂಕು ಕೃಷಿಕ ಸಮಾಜ ಮತ್ತು ಕೃಷಿ ಇಲಾಖೆ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ತಾಲೂಕು ಪಂಚಾಯತ್ ಎಸ್.ಜೆ.ಎಸ್.ವೈ ಸಭಾಂಗಣದಲ್ಲಿ ಮಾಜಿ ಪ್ರಧಾನಮಂತ್ರಿ ಚೌಧರಿ ಚರಣ್ ಸಿಂಗ್ ಸ್ಮರಣಾರ್ಥ ಆಚರಿಸಲಾಗುವ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ ಡಿ.29 ರಂದು ಸೋಮವಾರ ನಡೆಯಲಿದೆ ಎಂದು ತಾಲೂಕು ಅಧ್ಯಕ್ಷ ಪದ್ಮರಾಜ್ ಬಲ್ಲಾಳ್ ತಿಳಿಸಿದರು.

ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಢಿಯಲ್ಲಿ ಮಾತನಾಡಿದರು. ರೈತ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಶೇ. 90ರ ಸಹಾಯಧನದಲ್ಲಿ ನೀಡಲಾಗುವ ತುಂತುರು ನೀರಾವರಿ ಘಟಕ, ಶೇ. 50ರ ಸಹಾಯಧನದಲ್ಲಿ ನೀಡಲಾಗುವ ಪವರ್ ಸ್ವ್ರೇಯರ್ ಯಂತ್ರ, ಯಂತ್ರ ಚಾಲಿತ ಮೋಟೋ ಕಾರ್ಟ್ ತಳ್ಳುಗಾಡಿ, ಕೃಷಿ ಭಾಗ್ಯ ಯೋಜನೆ ಫಲಾನುಭವಿಗಳಿಗೆ ಕೃಷಿ ಹೊಂಡ ನಿರ್ಮಾಣದ ಸಾಂಕೇತಿಕ ಕಾರ್ಯಾದೇಶ ವಿತರಣೆ ಕಾರ್ಯಕ್ರಮ ಜರುಗಲಿರುವುದು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಕೃಷಿಕ ಸಮಾಜದ ಪ್ರಮುಖರಾದ ಪದ್ಮನಾಭ ರೈ, ಉಮ್ಮರ್ ಮಂಚಿ, ಬದ್ರುದ್ದೀನ್ ಮಂಚಿ ಉಪಸ್ಥಿತರಿದ್ದರು.