ಸುಳ್ಯ, ಡಿ. 28 (DaijiworldNews/TA): ತಾಲೂಕಿನ ತೊಡಿಕಾನ ಗ್ರಾಮದ ಪಡ್ಪು ಶ್ರೀ ಮಹಾವಿಷ್ಣು ಮೂರ್ತಿ ದೈವದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಯುಕ್ತ ಡಿಸೆಂಬರ್ 26ರಂದು ಕುತ್ತಿ ಪೂಜೆ ಮತ್ತು ಡಿಸೆಂಬರ್ 27ರಂದು ಬೆಳಿಗ್ಗೆ ವೈಭವದ ಹಸಿರುವಾಣಿ ಮೆರವಣಿಗೆ ನಡೆಯಿತು.

ಡಿ. 26ರಂದು ರಾತ್ರಿ ಉಪೇಂದ್ರ ಆಚಾರ್ಯ ಮಂಡೆಕೋಲು ಇವರ ನೇತೃತ್ವದಲ್ಲಿ ಕುತ್ತಿ ಪೂಜೆ ನಡೆಯಿತು. ಡಿ. 27ರಂದು ಬೆಳಿಗ್ಗೆ ಗಣಪತಿ ಹವನ ನಡೆದು ಬಳಿಕ ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ಬಳಿಯಿಂದ ಪಡ್ಪು ದೈವಸ್ಥಾನದ ತನಕ ವೈಭವದ ಹಸಿರುವಾಣಿ ಮೆರವಣಿಗೆ ನಡೆ ಯಿತು. ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ ಹಸಿರುವಾಣಿ ಮೆರವಣಿಗೆಗೆ ಚಾಲನೆ ನೀಡಿದರು.
ತೊಡಿಕಾನ ಗ್ರಾಮದ ವಿವಿಧ ಬೈಲುಗಳಿಂದ ಸಂಗ್ರಹಿಸಿದ ಹಸಿರುವಾಣಿ ದೇವಸ್ಥಾನದ ಆವರಣದಲ್ಲಿ ಸಂಗ್ರಹಗೊಂಡು ಬಳಿಕ ಅಲ್ಲಿಂದ ವಾಹನ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು. ಭಜನೆ, ಕುಣಿತ ಭಜನೆ, ಸಿಡಿಮದ್ದು ಮೆರವಣಿಗೆಗೆ ಮೆರುಗು ನೀಡಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಬಾಳಿಕಜೆ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ ಕೆ ನಾರಾಯಣ, ಗೌರವಾಧ್ಯಕ್ಷ ಪದ್ಮಯ ಗೌಡ ಪಡ್ಪು, ಪ್ರಧಾನ ಕಾರ್ಯದರ್ಶಿ ಕಮಲಾಕ್ಷ ಪಡ್ಪು , ಉಪಾಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ, ಜಗದೀಶ್ ಬಾಳೆಕಜೆ, ಕೋಶಾಧಿಕಾರಿ ರವೀಂದ್ರ ಪಂಜಿಕೋಡಿ, ಜೊತೆ ಕಾರ್ಯದರ್ಶಿ ಆನಂದ ಕಲ್ಲಗದ್ದೆ, ವ್ಯವಸ್ಥಾಪನ ಸಮಿತಿ ಸದಸ್ಯರಾದ ದೀಪಕ್ ಕುತ್ತಮೊಟ್ಟೆ ಮತ್ತಿತರರು ಉಪಸ್ಥಿತರಿದ್ದರು.