ಕಾಸರಗೋಡು, ಡಿ. 27 (DaijiworldNews/TA): ರೈಲು ಬಡಿದು ಕೊಡಗು ನಿವಾಸಿಯೋರ್ವ ಮೃತಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ಕಾಸರಗೋಡು ನಿಲ್ದಾಣದಲ್ಲಿ ನಡೆದಿದೆ. ಕೊಡಗು ನಿವಾಸಿ ರಾಜೇಶ್ (35) ಮೃತಪಟ್ಟವರು.

ರೈಲಿನಿಂದಿಳಿದು ಹಳಿಯ ಮೂಲಕ ಅಡ್ಡದಾಟಿ ಫ್ಲಾಟ್ ಫೋರ್ಮ್ ಹತ್ತಲು ಯತ್ನಿಸುತ್ತಿದ್ದಾಗ ಗೂಡ್ಸ್ ರೈಲು ಬಡಿದು ಘಟನೆ ನಡೆದಿದೆ. ಅಫಘಾತಕ್ಕೀಡಾದ ವ್ಯಕ್ತಿಯ ತಲೆ ಸಂಪೂರ್ಣ ಜಜ್ಜಿ ಹೋಗಿದೆ. ಮೃತದೇಹ ಧರಿಸಿದ್ದ ಅಂಗಿಯ ಜೇಬಿನಿಂದ ದೊರೆತ ಆಧಾರ್ ಕಾರ್ಡಿನಲ್ಲಿ ಮಾಹಿತಿಯಂತೆ ಮೃತ ವ್ಯಕ್ತಿಯನ್ನು ಗುರುತಿಸಲಾಗಿದೆ. ಮೃತ ಶರೀರದ ಅವಶೇಷಗಳನ್ನು ಸಂಗ್ರಹಿಸಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ರೖಲು ದುರಂತದಲ್ಲಿ ಮೃತಪಟ್ಟ ಮಾಹಿತಿಯನ್ನು ಮೃತರ ಸಂಬಂಧಿಕರಿಗೆ ರೖಲ್ವೇ ಪೊಲೀಸರು ತಿಳಿಸಿದ್ದಾರೆ. ಮೃತರು ಕರ್ನಾಟಕ ಕೊಡಗು ಜಿಲ್ಲೆಯ ಗೋಣಿಮಾಗೂರು ಸೋಮವಾರಪುರದ ಚೆನ್ನಯ್ಯ ಎಂಬವರ ಪುತ್ರನೆಂದು ಆಧಾರ್ ಕಾರ್ಡ್ ಮಾಹಿತಿಯಿಂದ ತಿಳಿದುಬಂದಿದೆ. ರೈಲು ಇಳಿದು ಅಜಾಗೂರುಕತೆಯಿಂದ ಹಳಿ ಅಡ್ಡದಾಟಿ ರೖಲು ನಿಲ್ದಾಣದ ಫ್ಲಾಟ್ ಫೋಮ್ ಏರಲು ಪ್ರಯತ್ನಿಸಿರುವುದೇ ಅಪಘಾತ ಮತ್ತು ದುರ್ಮರಣಕ್ಕೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.