ಬಂಟ್ವಾಳ, ಡಿ. 26 (DaijiworldNews/AK): ಬಂಟ್ವಾಳ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ) ವಾಮದಪದವು ಶಾಖೆಯ ಬಸ್ತಿಕೋಡಿ ಹರ್ಕಾಡಿ ಕಾಂಪ್ಲೆಕ್ಸ್ ಶುಕ್ರವಾರ ಉದ್ಘಾಟನೆಗೊಂಡಿತು.


ಅಜ್ಜಿಬೆಟ್ಟು ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕೇಸರರಾದ ಶ್ರೀಪಾದ ಪಾಂಗಣ್ಣಾಯ ಅವರು ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಒಂದು ಕಾಲದಲ್ಲಿ ಕುಗ್ರಾಮದಂತಿದ್ದ ವಾಮದಪದವು ಪ್ರಸ್ತುತ ಎಲ್ಲಾ ರೀತಿಯಲ್ಲಿಯು ಅಭಿವೃದ್ಧಿ ಹೊಂದುವಲ್ಲಿ ಮಾಜಿ ಸಚಿವ ರಮಾನಾಥ ರೈ ಅವರ ಕೊಡುಗೆ ಅಪಾರವಾಗಿದೆ. ವಾಮದಪದವು ಶಾಖೆ ಸಮಾಜಮುಖಿ, ಪಾರದರ್ಶಕವಾಗಿ ಕಾರ್ಯನಿರ್ವಹಿಸಿ ಸಮಾಜಕ್ಕೆ ಸಹಕಾರಿಯಾಗಲಿ ಎಂದು ಹಾರೈಸಿದರು.
ಬಂಟ್ವಾಳ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರು,ಮಾಜಿ ಸಚಿವ ಬಿ. ರಮಾನಾಥ ರೈ ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ,ಹೊಸ ಶಾಖೆ ತೆರೆಯುವುದರಿಂದ ಒಂದಷ್ಟು ಮಂದಿ ಉದ್ಯೋಗ ಸೃಷ್ಠಿಯಾಗುತ್ತಿದೆ. ಜಿಲ್ಲೆಯಲ್ಲಿ ವಿವಿಧ ಸಮುದಾಯಕ್ಕೊಳಪಟ್ಟ ಸೊಸೈಟಿಗಳು,ಕೃಷಿಪತ್ತಿನ ಸಹಕಾರಿ ಸಂಘ ಗಳು ಕಾರ್ಯಾಚರಿಸುತ್ತಿದ್ದರೂ, ತನ್ನದೇ ಆದ ಸಿದ್ದಾಂತದಡಿಯಲ್ಲಿ ಕಾರ್ಯಾರಂಭಗೊಂಡಿದೆ. ಗ್ರಾಹಕರು ಪಡೆದ
ಸಾಲವನ್ನು ಪ್ರಾಮಾಣಿಕವಾಗಿ ಸಕಾಲದಲ್ಲಿ ಮರುಪಾವತಿಸುವುದರಿಂದ ಸೊಸೈಟಿ ಲಾಭದಲ್ಲಿ ಮುನ್ನಡೆಯುತ್ತಿದೆ ಎಂದರು.
ವಾಮದಪದವು ಪೇಟೆ ಸರಕಾರದ ಎಲ್ಲಾ ಸೌಲಭ್ಯಗಳನ್ನು ಹೊಂದಿ ಬೆಳವಣಿಗೆಯ ಕೇಂದ್ರಸ್ಥಾನವಾಗಿದೆ.ಬಂಟ್ವಾಳ ತಾಲೂಕಿನಲ್ಲಿ ರಾಜ್ಯದಲ್ಲೇ ಮಾದಲಬಾರಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ತರುವ ಮೂಲಕ ಪ್ರತಿ ಗ್ರಾಮೀಣಭಾಗದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಂಡ ತೃಪ್ತಿ ತಂದಿದೆ ಎಂದರು. ಚೆನೈತ್ತೋಡಿ ಗ್ರಾ.ಪಂ.ಅಧ್ಯಕ್ಷೆ ವನಿತಾ ಗಣಕೀಕರಣ,ಉದ್ಯಮಿ ಸೀತಾರಾಮ ಪೈ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು.