ಬಂಟ್ವಾಳ,ಡಿ. 26 (DaijiworldNews/ AK): ಯಕ್ಷ ಶಿಕ್ಷಣ ವಿದ್ಯಾರ್ಥಿಗಳ ಓದಿಗೆ ಪೂರಕವಾಗಿದ್ದು,ಯಕ್ಷಗಾನ ಸಹಿತ ವಿವಿಧ ದೇಶಿ ಕಲೆಗಳಲ್ಲು ತೊಡಗಿಸಿಕೊಂಡಾಗ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಮೂಡುತ್ತದೆ. ಈ ನಿಟ್ಟಿನಲ್ಲಿ ಪೋಷಕರು ಕೂಡ ಅರ್ಥ ಮಾಡಿಕೊಳ್ಳಬೇಕು ,ಪ್ರಸ್ತುತ ಕಾಲಘಟದಲ್ಲಿ ಇದರ ತೀರಾ ಅಗತ್ಯವಿದೆ ಎಂದು ಯಕ್ಷದ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷರು,ಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಹೇಳಿದ್ದಾರೆ.



ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಗುರುವಾರ ರಾತ್ರಿ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ( ರಿ)ನ ಪುಂಜಾಲಕಟ್ಟೆ ಘಟಕ ಹಾಗೂ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ( ರಿ)ನ ಮಹಿಳಾ ಘಟಕದ 8 ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಜನೆ ಸಹಿತ ವಿವಿಧ ದೇಶಿ ಕಲೆಗಳಲ್ಲಿ ತೊಡಗಿಸಿಕೊಂಡರೆ ವಿದ್ಯಾರ್ಥಿಗಳ ಶೈಕ್ಚಣಿಕ ಬದುಕಿಗೆ ತೊಂದರೆಯಾಗುತ್ತದೆ ಎಂಬ ಆತಂಕ ಬೇಡ ಎಳವೆಯಿಂದಲ್ಲೇ ಯಕ್ಷಗಾನಲ್ಲಿ ಸಕ್ರಿಯವಾಗಿದ್ದುಕೊಂಡು ವೈದ್ಯೆಯಾಗಿರುವ ಡಾ.ವಿನಯಾ ಅವರ ಸಾಧನೆ ಇದಕ್ಕೆ ನಿದರ್ಶನವಾಗಿದೆ ಎಂದರು
ಕಳೆದ ವರ್ಷ ಶಾಸಕ ರಾಜೇಶ್ ನಾಯ್ಕ್ ಅವರ ಒಡ್ಡೂರು ಫಾಮ್೯ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಕ್ಷ ಶಿಕ್ಷಣದ 1200. ವಿದ್ಯಾರ್ಥಿಗಳು ರಂಗಪ್ರವೇಶ ಮಾಡಿದ್ದರೆ.ಜ.4 ರಂದು ಸಹ್ಯಾದ್ರಿ ಇಂಜಿನಿಯರಿಂಗ ಕಾಲೇಜ್ ಅವರಣದಲ್ಲಿ ವಿ.ಪ.ಸದಸ್ಯ ಮಂಜುನಾಥ ಭಂಡಾರಿಯವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 1400 ವಿದ್ಯಾರ್ಥಿಗಳು ರಂಗಪ್ರವೇಶ ಮಾಡಲಿದ್ದಾರೆ ಎಂದ ಅವರು ಯಕ್ಷ ಶಿಕ್ಷಣಕ್ಕೆ ಸಹಿತ ವಿವಿಧ ಯೋಜನೆಗಳಿಗೆ ಯಕ್ಷದ್ರುವ ಪಟ್ಲ ಪೌಂಡೇಶನ್ ನಿಂದ ವಾರ್ಷಿಕವಾಗಿ ಒಟ್ಟು 16 ಕೋ.ರೂ.ವ್ಯಯ ಮಾಡಲಾಗುತ್ತಿದೆ ಎಂದರು.
ಕಳೆದ ವರ್ಷ ಶಾಸಕ ರಾಜೇಶ್ ನಾಯ್ಕ್ ಅವರ ಒಡ್ಡೂರು ಫಾಮ್೯ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಕ್ಷ ಶಿಕ್ಷಣದ 1200. ವಿದ್ಯಾರ್ಥಿಗಳು ರಂಗಪ್ರವೇಶ ಮಾಡಿದ್ದರೆ.ಜ.4 ರಂದು ಸಹ್ಯಾದ್ರಿ ಇಂಜಿನಿಯರಿಂಗ ಕಾಲೇಜ್ ಅವರಣದಲ್ಲಿ ವಿ.ಪ.ಸದಸ್ಯ ಮಂಜುನಾಥ ಭಂಡಾರಿಯವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 1400 ವಿದ್ಯಾರ್ಥಿಗಳು ರಂಗಪ್ರವೇಶ ಮಾಡಲಿದ್ದಾರೆ ಎಂದ ಅವರು ಯಕ್ಷ ಶಿಕ್ಷಣಕ್ಕೆ ಸಹಿತ ವಿವಿಧ ಯೋಜನೆಗಳಿಗೆ ಯಕ್ಷದ್ರುವ ಪಟ್ಲ ಪೌಂಡೇಶನ್ ನಿಂದ ಒಟ್ಟು 16 ಕೋ.ರೂ.ವ್ಯಯ ಮಾಡಲಾಗುತ್ತಿದೆ.ಪೌಂಡೇಶ್ ನ ಪುಂಜಾಲಕಟ್ಟೆ ಘಟಕದಿಂದ ನಿರಂತರವಾಗಿ ಸಮಾಜಮುಖಿ ಕೆಲಸಗಳಾಗುತ್ತಿರುವುದು ಅಭಿನಂದನೀಯವಾಗಿದೆ ಎಂದರು.
ಪಿಲಾತಬೆಟ್ಟು ಕೃ.ಪ. ಸಹಕಾರಿ ಸಂಘದ ಅಧ್ಯಕ್ಷ ತುಂಗಪ್ಪ ಬಂಗೇರ ಮಾತನಾಡಿ,ಪ್ರಸ್ತುತ ಯಕ್ಷಗಾನ ಕಲೆಗೆ ಪಟ್ಲ ಸತೀಶ್ ಶೆಟ್ಟಿ ಅವರು ಮೌಲ್ಯವನ್ನು ತಂದುಕೊಟ್ಟಿದ್ದಾರೆ, ಕಲಾವಿದರಿಗೆ ನೀಡಲಾಗುವ ವಿಮಾ ಯೋಜನೆಯನ್ನು ಕಬಡ್ಡಿಪಟುಗಳಿಗೂ ವಿಸ್ತರಿಸುವ ಚಿಂತನೆ ಮಾಡಬೇಕು,ಮಕ್ಕಳಲ್ಲಿ ಸಂಸ್ಕಾರ ಬೆಳೆಯಬೇಕಾದರೆ ಯಕ್ಷಗಾನವು ಪ್ರಮುಖ ಪಾತ್ರ ಬಹಿಸುತ್ತದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಯಕ್ಷಧ್ರುವ ಕಲಾತಂಡ ಪುಂಜಾಲಕಟ್ಟೆ ಇದರ ವಿದ್ಯಾರ್ಧಿಗಳಿಂದ ಪುಣ್ಯಕೋಟಿ - ಕುಮಾರ ವಿಜಯ ಹಾಗೂ ಸಂಜೆ ಪಾವಂಜೆ ಮೇಳದವರಿಂದ ಶ್ರೀ ತುಳಸಿ ಯಕ್ಷಗಾನ ಪ್ರದರ್ಶನ ಜರುಗಿತು. ಶಾಸಕ ರಾಜೇಶ್ ನಾಯ್ಕ್ ಅವರು ಭೇಟಿ ನೀಡಿ ಶ್ರೀದೇವರ ಪ್ರಸಾದ ಸ್ವೀಕರಿಸಿದರು.