ಮಂಗಳೂರು, ಡಿ. 26 (DaijiworldNews/TA): ಕೆಲಸ ಮುಗಿಸಿ ಮನೆಗೆ ವಾಪಸ್ ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಮೂರುವರೆ ಪವನ್ ತೂಕದ ಚಿನ್ನದ ಸರ ಕಸಿದು ಕಳ್ಳನೊಬ್ಬ ಪರಾರಿಯಾದ ಘಟನೆ ಮಂಗಳೂರಿನ ಕೊಂಚಾಡಿ ಕೊಪ್ಪಲಕಾಡಿನಲ್ಲಿ ಗುರುವಾರ ಸಂಜೆ ನಡೆದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಸರ ಎಗರಿಸಿದ ವ್ಯಕ್ತಿ ಸ್ವಲ್ಪ ದೂರ ಹೋದ ಬಳಿಕ ತನ್ನ ಬಟ್ಟೆ ಬದಲಾವಣೆ ಮಾಡಿ, ಕಣ್ಮರೆಯಾಗಿದ್ದಾನೆ. ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಸರಗಳ್ಳನ ಚಲನ ವಲನದ ದೃಶ್ಯಾವಳಿಗಳು ಮನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.