ಬಂಟ್ವಾಳ, ಡಿ. 26 (DaijiworldNews/TA): ತಾಲೂಕಿನ ಎಲ್ಲಾ ಬಾಲಗೋಕುಲಗಳ ಸಮ್ಮಿಲನ "ಗೋಕುಲೋತ್ಸವ" ಕಾರ್ಯಕ್ರಮ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಿತು. ಕೈಕಂಬ ಪೊಳಲಿ ದ್ವಾರದಿಂದ ಸ್ಪರ್ಶಾ ಕಲಾ ಮಂದಿರದವರೆಗೆ ಬಾಲಗೋಕುಲ ತಂಡಗಳಿಂದ ಕುಣಿತ ಭಜನೆ ಮುಖೇನ ಭವ್ಯ ಶೋಭಾಯಾತ್ರೆ ನಡೆಯಿತು.

ಕೈಕಂಬದಲ್ಲಿ ಪ್ರಾರಂಭಗೊಂಡ ಗೋಕುಲೋತ್ಸವ ಕಾರ್ಯಕ್ರಮದ ಶೋಭಾಯಾತ್ರೆಯನ್ನು ಆರ್.ಎಸ್.ಎಸ್. ಪ್ರಮುಖ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಚಾಲನೆ ನೀಡಿದರು. ಸ್ಪರ್ಶಾ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಠಲ ನಾಯಕ್ ಕಲ್ಲಡ್ಕ ಅವರಿಂದ ಮಕ್ಕಳಿಗೆ ವಿಶೇಷ ಚಟುವಟಿಕೆಗಳು, ಮಾತಾಜಿಗಳಿಗೆ ಹಾಗೂ ಪೋಷಕರಿಗೆ ಪ್ರತ್ಯೇಕ ವಿಚಾರಗೋಷ್ಠಿ ನಡೆಯಿತು.