ಬಂಟ್ವಾಳ, ಡಿ. 25 (DaijiworldNews/TA): ಹೋಟೆಲ್ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ನೆತ್ರಕೆರೆ ನಿವಾಸಿ ಹರೀಶ್ ಬಂಧಿತ ಆರೋಪಿ.

ಕಳ್ಳಿಗೆ ಗ್ರಾಮದ ನೆತ್ರಕೆರೆ ಹೊಟೇಲ್ ನಲ್ಲಿ ಪರವಾನಗಿ ಇಲ್ಲದ ಮದ್ಯವನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಾಳಿಯ ವೇಳೆ ಹೋಟೆಲ್ ನಲ್ಲಿ ರೂ.4 ಸಾವಿರ ಮೌಲ್ಯದ ರೂ.50. ಮುಖಬೆಲೆಯ 90 ml ನ 80 ಸ್ಯಾಚೆಟ್ ಗಳು ಹಾಗೂ ಮಾರಾಟದ ಬಳಿಕ ಬಂದ ರೂ.1000 ಸಾವಿರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.