ಉಡುಪಿ, ಡಿ. 25 (DaijiworldNews/TA): ಕಲ್ಸಂಕದಿಂದ ಅಂಬಾಗಿಲು ಬಳಿ ಸೇರುವ ಮಾರ್ಗದ ನಡುವಿನಲ್ಲಿ ಮ್ಯಾನ್ ಹೋಲ್ ಒಡೆದು ಹೋಗಿ, ದಿನನಿತ್ಯ ವಾಹನ ಸವಾರರು ಎಚ್ಚೆತ್ತು ವಾಹನ ಚಲಾಯಿಸಬೇಕಾದ ಪರಿಸ್ಥಿತಿ ಎದುರಾಗಿತ್ತು. ಈ ಬಗ್ಗೆ ದಾಯ್ಜಿವರ್ಲ್ಡ್ ಮಾಧ್ಯಮದಲ್ಲಿ ಸಮಗ್ರ ವರದಿ ಮಾಡಿ ಅಧಿಕಾರಿಗಳನ್ನು ಎಚ್ಚರಿಸುವ ಕಾರ್ಯ ನಡೆದಿತ್ತು. ಕೊನೆಗೂ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಇದೀಗ ರಿಪೇರಿ ಕಾಮಗಾರಿ ಆರಂಭವಾಗಿದೆ.

ಸಮಸ್ಯೆ ಬೆಳಕಿಗೆ ಅನೇಕ ದಿನಗಳು ಕಳೆದರೂ ಇಲಾಖೆಗಳು ಮ್ಯನ್ ಹೋಲ್ ಸರಿಪಡಿಸದ ಕಾರಣ ಪರಿಸ್ಥಿತಿ ಬಿಗಡಾಯಿಸಿತ್ತು. ಅಲ್ಲದೆ ವಾಹನ ಸವಾರರು ಅಪಾಯದಿಂದಲೇ ವಾಹನ ಚಲಾಯಿಸಬೇಕಾದ ಪರಿಸ್ಥಿತಿ ಎದುರಾಗಿತ್ತು. ಇಲ್ಲಿ ದಿನನಿತ್ಯ ಅನೇಕ ವಾಹನಗಳು ಸಂಚಾರ ಮಾಡುವುದರಿಂದ ವಾಹನ ಸವಾರರಿಗು ಬಹಳಷ್ಟು ತೊಂದರೆ ಕೂಡ ಆಗಿತ್ತು .
ಇದೀಗ ಕೊನೆಗೆ ರಿಪೇರಿ ಕಾಮಗಾರಿ ಆರಂಭಗೊಂಡಿದ್ದು, ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಈಗಾಗಲೇ ಸ್ಥಳದಲ್ಲಿ ಅನೇಕ ದ್ವಿಚಕ್ರ ವಾಹನ ಸವಾರರು ರಾತ್ರಿ ವೇಳೆಯಲ್ಲಿ ಬಿದ್ದು ಗಾಯ ಗೊಂಡ ಘಟನೆ ಕೂಡ ನಡೆದಿದೆ. ಕಾಮಗಾರಿ ಆರಂಭವಾಗ ತೊಡಗಿದೆ. ನಡೆಯುತ್ತಿರುವ ಕಾಮಗಾರಿಯಿಂದ ಉತ್ತಮ ರಸ್ತೆ ನಿರ್ಮಾಣವಾಗಲಿ ಎಂಬುದು ಜನರ ಆಗ್ರಹ.