ಮಂಗಳೂರು, ಡಿ. 25 (DaijiworldNews/TA): ಏಸು ಕ್ರಿಸ್ತರ ಜನ್ಮ ಸ್ಮರಣೆಯ ಕ್ರಿಸ್ಮಸ್ ಹಬ್ಬವನ್ನು ಕುಲಶೇಖರದ ಚರ್ಚ್ನಲ್ಲಿ ಕ್ರೈಸ್ತ ಬಾಂಧವರು ಬುಧವಾರ ತಡರಾತ್ರಿ ಶ್ರದ್ಧಾಪೂರ್ವಕವಾಗಿ ಆಚರಿಸಿದರು.



ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕುಲಶೇಖರದ ಚರ್ಚ್ನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಚರ್ಚ್ಗಳ ಆವರಣ ಹಾಗೂ ಕ್ರೈಸ್ತರ ಮನೆಗಳಲ್ಲಿ ಗೋದಲಿ ನಿರ್ಮಿಸಿ, ಕ್ರಿಸ್ತ ಜನನದ ಸ್ಮರಣೆಯನ್ನು ಜೀವಂತವಾಗಿಟ್ಟರು. ರಾತ್ರಿ ವೇಳೆ ಚರ್ಚ್ಗಳಲ್ಲಿ ಕ್ಯಾರೊಲ್ ಗಾಯನದ ಮೂಲಕ ಕ್ರಿಸ್ತ ಜನನವನ್ನು ಸ್ಮರಿಸಿ ಸಂಭ್ರಮಿಸಲಾಯಿತು.