ಮಂಗಳೂರು,ಡಿ. 24 (DaijiworldNews/AK): ನಗರದಲ್ಲಿ ಫ್ಲೆಕ್ಸ್ಗಳು ಮತ್ತು ಬ್ಯಾನರ್ಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ತನ್ನ ತೆರವು ಕಾರ್ಯಾಚರಣೆ ನಡೆಸಿ ದಂಡ ವಿಧಿಸಲು ಮುಂದಾಗಿದೆ. ಇದಕ್ಕಾಗಿ ಮೂರು ವಲಯಗಳಲ್ಲಿ ಮೂರು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ.

ಫ್ಲೆಕ್ಸ್ಗಳು ಮತ್ತು ಬ್ಯಾನರ್ಗಳನ್ನು ನಿಯಂತ್ರಿಸಲು, ನಗರವನ್ನು ಸುರತ್ಕಲ್, ಕದ್ರಿ ಮತ್ತು ಲಾಲ್ಬಾಗ್ ಎಂಬ ಮೂರು ವಲಯಗಳಾಗಿ ವಿಂಗಡಿಸಲಾಗಿದೆ ಮತ್ತು ಪ್ರತಿ ವಲಯದಲ್ಲಿ ಒಂದು ತಂಡವನ್ನು ನಿಯೋಜಿಸಲಾಗಿದೆ. ಪ್ರತಿ ತಂಡವು ಸಹಾಯಕ ಕಂದಾಯ ಅಧಿಕಾರಿ, ಕಂದಾಯ ಇಲಾಖೆ ನಿರೀಕ್ಷಕರು, ಬಿಲ್ ಕಲೆಕ್ಟರ್ ಮತ್ತು ಇತರ ಸಿಬ್ಬಂದಿಯನ್ನು ಒಳಗೊಂಡಿರುತ್ತದೆ.
ನಗರದಾದ್ಯಂತ ಅನಧಿಕೃತ ಫ್ಲೆಕ್ಸ್ಗಳು ಮತ್ತು ಬ್ಯಾನರ್ಗಳು ಕಂಡುಬಂದಲ್ಲೆಲ್ಲಾ ಈ ತಂಡಗಳು ತೆಗೆದುಹಾಕುತ್ತವೆ ಮತ್ತು ದಂಡವನ್ನು ಸಹ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.