ಮಂಗಳೂರು, ಡಿ. 24 (DaijiworldNews/AK):ಪಾರ್ಕ್ ಮಾಡಿದ್ದ ಕಾರೊಂದು ಚಾಲಕನಿಲ್ಲದೇ ಸ್ವಯಂಚಾಲಿತವಾಗಿ ಚಲಿಸಿ, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಮಂಗಳೂರು ಜೈಲ್ ರೋಡ್ ನಲ್ಲಿ ನಡೆದಿದೆ.

ಮುಂದೆಯೇ ಇಳಿಜಾರು ರಸ್ತೆ ಇದ್ದು, ಸದ್ಯ ಸಂಭಾವ್ಯ ಅಪಾಯ ತಪ್ಪಿದೆ. ರಸ್ತೆಯಲ್ಲಿ ವಾಹನ ಸಂಚಾರ ಮತ್ತು ಪಾದಚಾರಿಗಳ ಓಡಾಟ ಹೆಚ್ಚಿರುವುದರಿಂದ, ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಘಟನೆ ಸಂದರ್ಭ ಕಾರಿನಲ್ಲೂ ಯಾರೂ ಇಲ್ಲದಿರುವುದರಿಂದ ಅಪಾಯ ತಪ್ಪಿದಂತಾಗಿದೆ.