ಮಂಗಳೂರು, ಡಿ. 22 (DaijiworldNews/TA): ಶಕ್ತಿನಗರದಲ್ಲಿರುವ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆ ಸಾನಿಧ್ಯದಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ “ರ” ಕೊಂಕಣಿ ವಾರಪತ್ರಿಕೆಯ ಸಂಪಾದಕರಾದ ಫಾದರ್ ರೂಪೇಶ್ ಅಶೋಕ್ ಮಾಡ್ತ ಇವರು ಆಶೀರ್ವಚನವನ್ನು ನೀಡಿದರು.



ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಪೋಲಿಸ್ ಅಧೀಕ್ಷಕ ಅನಿಲ್ ಕುಮಾರ್ ಬೊಮ್ಮರಡ್ಡಿ, ಕೆ.ಎಸ್.ಪಿ.ಎಸ್. ಭಾಗವಹಿಸಿದ್ದರು. ಸಂತೋಷ್ ಅರೇಂಜರ್ ಕಂಕನಾಡಿ ಮಾಲಕರಾದ ಶ್ರೀ ಸಂತೋಷ್ ಸಿಕ್ವೆರಾ ಹಾಗೂ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರ ಉಜಿರೆ ಇದರ ಸಲಹಾ ಸಮಿತಿ ಸದಸ್ಯರಾಗಿರುವ ರೋಷನ್ ಸಿಕ್ವೆರಾ ಗೌರವ ಅತಿಥ್ಯದಲ್ಲಿ ಸಭಾ ಕಾರ್ಯಕ್ರಮ ಜರಗಿತು. ಮಾತ್ರವಲ್ಲದೆ ವಿಶೇಷ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಹ ಜರುಗಿತು.