ಮಂಗಳೂರು, ಡಿ. 22 (DaijiworldNews/TA): ದಾಯ್ಜಿವರ್ಲ್ಡ್ ಸಂಸ್ಥೆಯು ತನ್ನ ಬೆಳ್ಳಿಹಬ್ಬದ ಆಚರಣೆಯ ಪ್ರಯುಕ್ತ ಆಯೋಜಿಸಿರುವ ಹಿಸ್ನಾ ಮಿಸ್ ದೈಜಿವರ್ಲ್ಡ್ 2026 ಸೌಂದರ್ಯ ಸ್ಪರ್ಧೆಯ ಟಾಪ್ 12 ಸ್ಪರ್ಧಿಗಳನ್ನು ಘೋಷಿಸಲಾಗಿದೆ. ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ 2026 ರ ಫೆಬ್ರವರಿ 14ರಂದು ಮಂಗಳೂರಿನಲ್ಲಿ ನಡೆಯಲಿದೆ.

Top 30 contestants


Sai Shruthi


Shika Sushil


Alvina Mendonca


Fae Martis


Varsha Lobo


Gail Naiara Castelino


Shaina Chrystle D’Souza


Jyothi Lisha Vas


Serena Eugene Francis


Keerthana Suvarna


Nilima Rodrigues


Aashna Jewel D’Souza








Judges













ಕೀರ್ತನಾ ಸುವರ್ಣ, ಆಶ್ನಾ ಜ್ಯುವೆಲ್ ಡಿಸೋಜಾ, ಅಲ್ವಿನಾ ಮೆಂಡೋನ್ಕಾ, ಫೇ ಮಾರ್ಟಿಸ್, ಗೇಲ್ ನಯರಾ ಕ್ಯಾಸ್ತೆಲಿನೋ, ಜ್ಯೋತಿ ಲಿಶಾ ವಾಸ್, ನಿಲಿಮಾ ರೋಡ್ರಿಗಸ್, ಸಾಯಿ ಶ್ರುತಿ, ಸೆರೆನಾ ಯುಜೀನ್ ಫ್ರಾನ್ಸಿಸ್, ಶೈನಾ ಕ್ರಿಸ್ಟಲ್ ಡಿಸೋಜಾ, ಶಿಖಾ ಸುಹಿಲ್ ಹಾಗೂ ವರ್ಷಾ ಲೋಬೊ ಫೈನಲ್ ಹಂತಕ್ಕೆ ಲಗ್ಗೆಯಿಟ್ಟಿದ್ದಾರೆ.
ಡಿಸೆಂಬರ್ 14 ರಂದು ಮಂಗಳೂರಿನ ಕಾಪಿಕಾಡ್ನ ಅಜಂತಾ ಬಿಸಿನೆಸ್ ಸೆಂಟರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರ್ಸನಾಲಿಟಿ, ಜ್ನಾನ ಮತ್ತು ಆತ್ಮವಿಶ್ವಾಸದ ಪರೀಕ್ಷೆಯ ಮೂಲಕ ಅಂತಿಮ ಸುತ್ತಿಗೆ ಸ್ಪರ್ಧಿಗಳ ಆಯ್ಕೆ ನಡೆದಿತ್ತು. ಓಟ್ಟು 30 ಸ್ಪರ್ಧಿಗಳು ಆಯ್ಕೆ ಹಂತಕ್ಕೆ ಅರ್ಹತೆಯನ್ನು ಪಡೆದಿದ್ದರು. ವೈಯುಕ್ತಿಕ ಚಿಂತನೆಗಳ ಜೊತೆಗೆ ಮಾಹಿತಿಯ ಜೊತೆಗೆ , ಕ್ಯಾಟ್ವಾಕ್, ವಸ್ತ್ರಧಾರಣೆ ಮೂಲಕ ಸ್ಪರ್ಧಿಗಳು ತಮ್ಮನ್ನು ಪರಿಚಯಿಸಿ, ತೀರ್ಪುಗಾರರ ಪ್ರಶ್ನೆಗಳಿಗೆ ಅತ್ಯುತ್ತಮ ರೀತಿಯಲ್ಲಿ ಉತ್ತರ ನೀಡಿದರು.
ಸಿನೆಮಾ ಹಾಗೂ ಫ್ಯಾಶನ್ ಕಾರ್ಯಕ್ರಮಗಳಲ್ಲಿ ಹೆಸರುವಾಸಿಯಾದ ವೆನ್ಸಿಟಾ ಡಯಾಸ್, ಸಿದ್ಧಾರ್ಥ್ ಶೆಟ್ಟಿ, ಮತ್ತು ಗಾನಾ ಭಟ್ ತೀರ್ಪುಗಾರರಾಗಿ ಹಾಜರಿದ್ದರು. ಖ್ಯಾತ ನಿರೂಪಕಿ , ಕಾರ್ಯಕ್ರಮ ಸಂಯೋಜಕಿ ಹಾಗೂ ಫಿಶಿಂಗ್ ಕ್ಯಾಟ್ ಸಂಸ್ಥೆಯ ಪಾಲುದಾರೆ ಹೇರಾ ಪಿಂಟೊ ಆಯ್ಕೆ ಸುತ್ತಿಗೆ ನೇತೃತ್ವ ನೀಡಿದರು. ದಾಯ್ಜಿವರ್ಲ್ಡ್ ಮಾಧ್ಯಮ ಸಂಸ್ಥೆಯ ನಿರ್ದೇಶಕರಾದ ಮೆಲ್ವಿನ್ ರೊಡ್ರಿಗಸ್ ಸ್ವಾಗತಿಸಿದರು.