ಮಂಗಳೂರು, ಡಿ. 22 (DaijiworldNews/AA): ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕುಸ್ತಿ (ರಿ.) ಮಂಗಳೂರು ಇದರ 49ನೇ ತುಳುನಾಡ ಕೇಸರಿ ಹಾಗೂ ತುಳುನಾಡ ಕುಮಾರ ಪ್ರಶಸ್ತಿಗಳ ಕುಸ್ತಿ ಪಂದ್ಯಾಟ ದಿನಾಂಕ ಡಿಸೆಂಬರ್ 21 ರಂದು ದೇರಳಕಟ್ಟೆ ಏನೆಪೋಯ ಯೂನಿವರ್ಸಿಟಿ ಎಂಡುರೆನ್ಸ್ ಝೋನ್ ನಲ್ಲಿ ಜರುಗಿತು.


ಉದ್ಘಾಟನಾ ಕಾರ್ಯಕ್ರಮದಲ್ಲಿ ಯು. ಟಿ ಇಫ್ತಿಕರ್ ಫರೀದ್, ಮಮತಾ ಗಟ್ಟಿ, ವಿ. ಇಬ್ರಾಹಿಂ ನಡುಪದವು, ಅರುಣ್ ಪ್ರಭಾ, ರವೀಂದ್ರ ಶೆಟ್ಟಿ ಉಳಿದೊಟ್ಟು, ಪ್ರಕಾಶ್ ಪೂಜಾರಿ ಗರೋಡಿ, ಸುಜಿತ್ ಕೆ. ವಿ., ಎಂ. ಸುರೇಶ್ಚಂದ್ರ ಶೆಟ್ಟಿ, ದಿಲ್ ರಾಜ್ ಆಳ್ವ, ಪ್ರಶಾಂತ್ ಶೆಟ್ಟಿ, ರೋಹಿದಾಸ್ ಬಂಗೇರ, ಅರುಣ್ ಪುತ್ರನ್, ಜುಲ್ಫಿಕರ್ ಅಲಿ, ನವೀನ್ ಕರ್ಕೇರ, ರವಿರಾಜ್ ಶೆಟ್ಟಿ, ಜೀಶನ್ ಅಲಿ, ಸುಧೀರ್, ಶಿವರಾಜ್ ಮುಂತಾದವರು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಕೆ.ಟಿ.ಸುವರ್ಣ, ಚಂದ್ರಹಾಸ ಅಡ್ಯಂತಾಯ ಕುತ್ತಾರ್ ಗುತ್ತು, ಪ್ರಸಾದ್ ರೈ ಕಲ್ಲಿಮಾರ್, ಪ್ರದೀಪ್ ಡಿ'ಸೋಜ, ಜಿತೇಂದ್ರ ಶೆಟ್ಟಿ ತಲಪಾಡಿ ಗುತ್ತು, ಸಂದೀಪ್ ಪುತ್ರನ್ ಉಳ್ಳಾಲ, ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕುಸ್ತಿ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ಪ್ರಶಸ್ತಿ ವಿಜೇತರು:
ತುಳುನಾಡ ಕೇಸರಿ 2025 ಪ್ರಶಸ್ತಿಯನ್ನು ನಟರಾಜ್, ತುಳುನಾಡ ಕುಮಾರ 2025 ಪ್ರಶಸ್ತಿಯನ್ನು ನಶಾಲ್ ಅಹ್ಮದ್, ಮಾಸ್ಟರ್ ಶಿವಾಜಿ 2025 ಪ್ರಶಸ್ತಿಯನ್ನು ಮನೋಜ್ ಬೆಂಗ್ರೆ ಅವರು ಪಡೆದುಕೊಂಡರು.
ತುಳುನಾಡ ಕುವರಿ 2025 ಪ್ರಶಸ್ತಿಯನ್ನು ದೀಕ್ಷಾ ಅವರು ಪಡೆದರು. ಪುರುಷರ ವಿಭಾಗದಲ್ಲಿ ಶ್ರೀ ವೀರ ಭಾರತಿ ವ್ಯಾಯಾಮ ಶಾಲೆ ಸಮಗ್ರ ತಂಡ ಪ್ರಶಸ್ತಿ ಪಡೆದುಕೊಂಡರೆ, ಮಹಿಳೆಯರ ವಿಭಾಗದಲ್ಲಿ ಶಿವಾಜಿ ಫಿಸಿಕಲ್ ಅಂಡ್ ಕಲ್ಚರಲ್ ಇನ್ಸ್ಟಿಟ್ಯೂಟ್ ಬೋಳಾರ ಸಮಗ್ರ ತಂಡ ಪ್ರಶಸ್ತಿ ಪಡೆದುಕೊಂಡಿತು.
ಫಲಿತಾಂಶ:
ಪುರುಷರ 36 ಕೆಜಿ ಮಾಸ್ಟರ್ ಶಿವಾಜಿ ವಿಭಾಗದಲ್ಲಿ ದ್ವಿತೀಯ ನಿಹಾಲ್, ತೃತೀಯ ವರದೆ ಗೌಡ ಹಾಗೂ ದಕ್ಷಕ್, 42 ಕೆಜಿ ವಿಭಾಗದಲ್ಲಿ ಪ್ರಥಮ ಅಕ್ಷಯ್, ದ್ವಿತೀಯ ಆದಿಶ್, ತೃತೀಯ ಸೂರಜ್ ಹಾಗೂ ಮಲ್ಲೇಶ್, 46 ಕೆಜಿ ವಿಭಾಗದಲ್ಲಿ ಪ್ರಥಮ ಸಂತೋಷ, ದ್ವಿತೀಯ ಪರಶುರಾಮ, ತೃತೀಯ ನಮಿಶ್ ಹಾಗೂ ಫರನ್, 50 ಕೆಜಿ ವಿಭಾಗದಲ್ಲಿ ಪ್ರಥಮ ಪ್ರಜ್ವಲ್, ದ್ವಿತೀಯ ಪೃಥ್ವಿರಾಜ್, ತೃತೀಯ ಕುಮಾರ್ ಹಾಗೂ ಮುರಳಿ, 57 ಕೆಜಿ ವಿಭಾಗದಲ್ಲಿ ಪ್ರಥಮ ಬಾಬು, ದ್ವಿತೀಯ ಮದನ್, ತೃತೀಯ ವೀರಪ್ಪ ಹಾಗೂ ರಂಗನಾಥ್, 61 ಕೆಜಿ ತುಳುನಾಡ ಕುಮಾರ ವಿಭಾಗದಲ್ಲಿ ದ್ವಿತೀಯ ಪ್ರಜ್ವಲ್, ತೃತೀಯ ಮನೋಜ್ ಹಾಗೂ ಮುಭಾಶಿರ್, 65 ಕೆಜಿ ವಿಭಾಗದಲ್ಲಿ ಪ್ರಥಮ ಆಕಾಶ್, ದ್ವಿತೀಯ ಮಂಜು ತೃತೀಯ ಕೀರ್ತನ, ತೃತೀಯ ಅಶ್ವಿನ್, 74 ಕೆಜಿ ತುಳುನಾಡ ಕೇಸರಿ ವಿಭಾಗದಲ್ಲಿ ದ್ವಿತೀಯಾ ಗಗನ್, ಓಬಳೇಶ್, ತೃತೀಯ ಓಬಳೇಶ್ ಹಾಗೂ ಧನುಷ್, 86 ಕೆಜಿ ವಿಭಾಗದಲ್ಲಿ ಪ್ರಥಮ ರಾಕೇಶ್, ದ್ವಿತೀಯ ಚಿರಾಗ್, ತೃತೀಯ ಕೃಷ್ಣರಾಜ್ ಹಾಗೂ ಪ್ರತೀಕ್, +86 ಕೆಜಿ ವಿಭಾಗದಲ್ಲಿ ಪ್ರಥಮ ರಕ್ಷಿತ್, ದ್ವಿತೀಯ ಘನಶ್ಯಾಮ, ತೃತೀಯ ಅವಿಶ್ ಹಾಗೂ ಆದಿ ಪಡೆದುಕೊಂಡಿದ್ದಾರೆ.
ಮಹಿಳೆಯರ 37 ಕೆಜಿ ವಿಭಾಗದಲ್ಲಿ ಪ್ರಥಮ ಕ್ಷಮಾ, ದ್ವಿತೀಯ ಜ್ಞಾನಿಕ, ತೃತೀಯ ಪ್ರಿನ್ಸಿಟಾ, 4 ಕೆಜಿ ವಿಭಾಗದಲ್ಲಿ ಪ್ರಥಮ ನೇಹಾ, ದ್ವಿತೀಯ ವರ್ಷ, ತೃತೀಯ ಮನಿಷಾ, 48 ಕೆಜಿ ತುಳುನಾಡ ಕುವರಿ ವಿಭಾಗದಲ್ಲಿ ದ್ವಿತೀಯ ಅನುಷಾ, ತೃತೀಯ ತನುಶ್ರೀ ಹಾಗೂ ಯಶಾ, 53 ಕೆಜಿ ವಿಭಾಗದಲ್ಲಿ ಪ್ರಥಮ ಧೃತಿ, ದ್ವಿತೀಯ ಅನ್ಯೂ, ತೃತೀಯ ಧನ್ಯಶ್ರೀ, 58 ಕೆಜಿ ವಿಭಾಗದಲ್ಲಿ ಪ್ರಥಮ ಊರ್ಮಿಳಾ, ದ್ವಿತೀಯ ಲಾವಣ್ಯ, ತೃತೀಯ ದಿಯಾ, 63 ಕೆಜಿ ವಿಭಾಗದಲ್ಲಿ ಪ್ರಥಮ ಅಧಿತಿ, ದ್ವಿತೀಯ ಲತಿಕಾ, ತೃತೀಯ ಪೂರ್ಣಿಮಾ, 69 ಕೆಜಿ ವಿಭಾಗದಲ್ಲಿ ಪ್ರಥಮ ಸಾಕ್ಷಿ, ದ್ವೀತಿಯ ದಿಶಾ, ತೃತೀಯ ಶಕೀರಾ, +69 ಕೆಜಿ ವಿಭಾಗದಲ್ಲಿ ಪ್ರಥಮ ಶಾಝಾ, ದ್ವಿತೀಯ ಹೃಲೇಖ, ತೃತೀಯ ನವ್ಯಶ್ರೀ ಪಡೆದುಕೊಂಡಿದ್ದಾರೆ.