ಉಡುಪಿ, ಡಿ. 22 (DaijiworldNews/AK): ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಉಡುಪಿಯ ದಿ ಒರಿಜಿನಲ್ ಆಭರಣ ಜುವೆಲ್ಲರ್ಸ್ ಸಂಸ್ಥೆಯು ಕ್ರಿಸ್ಮಸ್ ಅಂಗವಾಗಿ ಆಯೋಜಿಸಿದ್ದ ಆಭರಣ ಕ್ರಿಸ್ಮಸ್ ನಕ್ಷತ್ರ-ತಯಾರಿಕೆ ಸ್ಪರ್ಧೆಯು ಉಡುಪಿ ಆಭರಣ ಜ್ಯುವೆಲ್ಲರ್ಸ್ ಆವರಣದಲ್ಲಿ ಭಾನುವಾರ ಅದ್ಧೂರಿಯಾಗಿ ನಡೆಯಿತು.




ಕಲಾಪ್ರತಿಭಾ ಆರ್ಟ್ಸ್ ನ ಹಿರಿಯ ಕಲಾವಿದ ಶೇಖರ್ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಆಭರಣ ಸಂಸ್ಥೆಯ ಪ್ರಮುಖರಾದ ವೀಣಾ ಮಹೇಶ್ ಕಾಮತ್ ಶುಭ ಹಾರೈಸಿದರು. ಸ್ಪರ್ಧೆಯಲ್ಲಿ 30 ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸಿದ್ದರು.
ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ನೀಡಲಾಯಿತು. ವಿಶೇಷ ಆಕರ್ಷಣೆಯಾಗಿ ಎರಡು ಸಮಾಧಾನಕರ, ಒಂದು ವಿಶೇಷ ಬಹುಮಾನ ನೀಡಲಾಯಿತು. ನಾಗೇಂದ್ರ ಕೋಟ ಪ್ರಥಮ, ಅನ್ವಿತಾ, ಅದ್ವಿಕ್ ದ್ವಿತೀಯ ಬಹುಮಾನ, ತುಬಾ ಮತ್ತು ಹನಿಯಾ ತೃತೀಯ ಬಹುಮಾನ ವಿಜೇತರಾದರು, ಸಮಾಧಾನಕರ ಬಹುಮಾನವನ್ನು ಪೂರ್ಣಿಮಾ ಕಾಮತ್, ಶಾರದಾ ಮತ್ತು ಯಜ್ಞಿಕಾ ಹಾಗೂ ವಿಶೇಷ ಬಹುಮಾನವನ್ನು ಅಕ್ಷತಾ ರಾವ್ ಎಲ್. ಪಡೆದುಕೊಂಡರು. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಹಬ್ಬದ ಉಡುಗೊರೆ ವೋಚರ್ ಗಳನ್ನು ನೀಡಲಾಯಿತು.
ಆಭರಣ ಸಂಸ್ಥೆಯ ಸ್ಟೋರ್ ಮ್ಯಾನೇಜರ್ ಅಜಿತ್ ನಾಯಕ್, ಮುರುಳೀಧರ್ ಆಚಾರ್ಯ, ಸ್ವಾತಿ, ಸಲೀಂ, ಮಾರುಕಟ್ಟೆ ವ್ಯವಸ್ಥಾಪಕ ದಿನೇಶ್ ಶೆಟ್ಟಿಗಾರ್, ಮಾರ್ಕೆಟಿಂಗ್ ವಿಭಾಗದ ರಾಘವೇಂದ್ರ ನಾಯಕ್ ಅಜೆಕಾರು, ಸಿಬ್ಬಂದಿ ರೂಪೇಶ್, ಸುದರ್ಶನ್, ಪ್ರಶಾಂತ್, ರಾಘವೇಂದ್ರ ಶೆಟ್ಟಿಗಾರ್, ಧನುಷ್ ಉಪಸ್ಥಿತರಿದ್ದರು. ಅನಿಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.