ಕಾಸರಗೋಡು, ಡಿ. 22 (DaijiworldNews/AA): ಹಿಂದಿ ಸಿನಿಮಾದ ಹಿರಿಯ ಕಲಾವಿದೆ ಮನಿಷಾ ಕೊಯಿರಾಲ ಅವರು ಪ್ರಸಿದ್ಧವಾದ ಶ್ರೀ ಮಧೂರು ದೇಗುಲಕ್ಕೆ ಇಂದು ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು ಶ್ರೀದೇವರ ಪ್ರಸಾದ ಸ್ವೀಕರಿಸಿದರು.






ದೇಗುಲದ ಮರದ ಕೆತ್ತನೆಯ ಅದ್ಭುತ ಕಲಾ ವೈಭವವನ್ನು ವೀಕ್ಷಿಸಿ ನಟಿ ಮನಿಷಾ ಕೊಯಿರಾಲ ಮೆಚ್ಚುಗೆ ವ್ಯಕ್ತಪಡಿಸಿದರು. ಮನಿಷಾ ಅವರ ಜೊತೆ ಅವರ ತಂದೆ ನೇಪಾಳದ ಮಾಜಿ ಕ್ಯಾಬಿನೆಟ್ ಸಚಿವರಾದ ಪ್ರಕಾಶ್ ಕೊಯಿರಾಲ ದಂಪತಿಗಳು ಭೇಟಿ ನೀಡಿದರು.
ಮನಿಷಾ ಅವರು ಹಿಂದಿ ಸಿನಿಮಾದ ಬೊಂಬೈ ಗುಪ್ತ ದಿಲ್ ಸೇ, ಮನ್, ಇಂಡಿಯನ್ ಹೀಗೆ ಹತ್ತಾರು ಸಿನಿಮಾಗಳಲ್ಲಿ ಅಭಿನಯಿಸಿ ಪ್ರಸಿದ್ಧಿ ಪಡೆದಿದ್ದಾರೆ. ಅವರು ಶ್ರೀ ಮಧೂರು ದೇಗುಲಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ.
ದೇಗುಲದ ಹಿರಿಯ ಅರ್ಚಕರಾದ ಪಿ ಕೆ ಧನಂಜಯ ಅವರು ವಿಶೇಷ ಪ್ರಾರ್ಥನೆ ಮಾಡಿ ಇವರಿಗೆ ಪ್ರಸಾದ ನೀಡಿದರು. ದೇಗುಲದ ಹಿರಿಯ ಸಿಬ್ಬಂದಿ ಬಿ.ನ್ ಸುಬ್ರಹ್ಮಣ್ಯ ಅವರು ಜೊತೆಗಿದ್ದು ದೇಗುಲದ ಬಗ್ಗೆ ಮಾಹಿತಿ ನೀಡಿದರು. ಬೇಕಲದ ಕೇರಳ ಟೂರಿಸಮ್ ಇಲಾಖೆಯ ಅಧಿಕೃತರು ಜೊತೆಗಿದ್ದರು. ಈ ಸಂದರ್ಭದಲ್ಲಿ ಕಲಾವಿದ ರಾಜೇಶ್ ಅವರು ತಾನು ರಚಿಸಿದ ಗಣೇಶನ ಸ್ಮರಣಿಕೆಯನ್ನು ಅವರಿಗೆ ನೀಡಿದರು.