ಮಂಗಳೂರು, 19 (DaijiworldNews/AK):ಮಂಗಳೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಅಧ್ಯಕ್ಷರಾದ ಶ್ರೀ ಸುರೇಂದ್ರ ಕಂಬಳಿ ಇವರ ಅಧ್ಯಕ್ಷತೆಯಲ್ಲಿ ದಿನಾಂಕ ಡಿ. 19 ರಂದು ಅಪರಾಹ್ನ 3.00 ಕ್ಕೆ ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಸಭೆ ಜರುಗಿತು.


ಸಭೆಯಲ್ಲಿ ಇದೇ ಡಿಸಂಬರ್ 23 ರಂದು ಮಂಗಳೂರಿನ ಪುರಭವನದಲ್ಲಿ ಆಯೋಜಿಸಿರುವ ಜಿಲ್ಲಾ ಮಟ್ಟದ ಗ್ಯಾರಂಟಿ ಸಮಾವೇಶದ ತಯಾರಿ ಬಗ್ಗೆ ಚರ್ಚಿಸಲಾಯಿತು. ಸಮಾವೇಶಕ್ಕೆ ಬರುವ ಫಲಾನುಭವಿಗಳನ್ನು ಕರೆತರಲು ನಗರ ಹಾಗೂ ಗ್ರಾಮಾಂತರ ವ್ಯಾಪ್ತಿಯಲ್ಲಿ ಕೆಎಸ್ ಆರ್ ಟಿ ಸಿ ಬಸ್ಸುಗಳ ವ್ಯವಸ್ಥೆ ಮಾಡಿಸುವಂತೆ ಸದಸ್ಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಇದೇವೇಳೆ ಯುವನಿಧಿ ಗೆ ನೋಂದಣಿ ಮಾಡಿಕೊಳ್ಳುವ ಉದ್ದೇಶದಿಂದ ಸಮಾವೇಶದಲ್ಲಿ ಸ್ಟಾಲ್ ಗಳನ್ನು ಹಾಕಲಾಗುವುದು ಎಂದು ಸಭೆಯಲ್ಲಿ ಮಾಹಿತಿ ನೀಡಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶ್ರೀ ಮಹೇಶ್ ಕುಮಾರ್ ಹೊಳ್ಳ ಇವರು ಸಮಿತಿಯ ಸದಸ್ಯರು ಹಾಗೂ ಇಲಾಖಾ ಅಧಿಕಾರಿಗಳಿಗೆ ಸ್ವಾಗತಿಸಿದರು.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಸದಸ್ಯರಾದ ಅಲ್ ಸ್ಟನ್ ಡಿ ಕುನ್ಹ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಸದಸ್ಯರಾದ, ಪ್ರಶಾಂತ್ ಎಸ್, ನವಾಜ್, ಶೈಲಾ ನೀತಾ ಡಿ ಸೋಜಾ, , ರಿತೇಶ್ ಅಂಚನ್, ವಿದ್ಯಾ, ಶ್ರೀಧರ ಪಂಜ , ಮೊಹಮ್ಮದ್ ಮುಸ್ತಾಪ ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು, ತಾಲೂಕು ಪಂಚಾಯತ್ ಸಹಾಯಕ ಲೆಕ್ಕಧಿಕಾರಿ ಪರಮೇಶ್ವರ, ತಾಲೂಕು ಪಂಚಾಯತ್ ವ್ಯವಸ್ಥಾಪಕರು ಸುವರ್ಣಾ ಹೆಗಡೆ, ವಿಷಯ ನಿರ್ವಾಹಕರು ಆರೀಸ್ ಹಾಗೂ ತಾಲೂಕು ಐಇಸಿ ಸಂಯೋಜಕರಾದ ನಿಶ್ಮಿತ ಬಿ ಹಾಜರಿದ್ದರು.