ಮಂಗಳೂರು,19 (DaijiworldNews/AK): ಸೈಕಲ್ ಶಾಪ್ ನ ಕ್ಯಾಶ್ ಪೆಟ್ಟಿಗೆಯಿಂದ ಹಣ ಕದ್ದ ಘಟನೆ ತೊಕ್ಕೊಟ್ಟು ಫಾಸ್ಟ್ ಟ್ರ್ಯಾಕ್ ಸೈಕಲ್ ಶಾಪಿನಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಕಳ್ಳತನದ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಫಾಸ್ಟ್ ಟ್ರ್ಯಾಕ್ ಸೈಕಲ್ ಶಾಪಿನಲ್ಲಿ ಅಮ್ಮ ಇಲೆಕ್ಟ್ರಾನಿಕ್ಸ್ ಪಕ್ಕದಲ್ಲಿರುವ ಸೈಕಲ್ ಶಾಪ್ ನಲ್ಲಿ ಘಟನೆ ಬೆಳಕಿಗೆ ಬಂದಿದೆ. ಮಾಹಿತಿಯ ಪ್ರಕಾರ, ರಸ್ತೆಬದಿಯಲ್ಲಿ ಪೊಲೀಸ್ ವಾಹನ ಬಂದು ನಿಂತ ವಿಚಾರ ತಿಳಿದುಕೊಳ್ಳಲು ಅಂಗಡಿ ಮಾಲೀಕರು, ಸಿಬ್ಬಂದಿಗಳು ತೆರಳಿದ್ದರು. ಈ ವೇಳೆ ಸುತ್ತಮುತ್ತಲ ಅಂಗಡಿಗಳಲ್ಲಿ ಯಾರೂ ಇಲ್ಲ ಎಂದು ಖಾತರಿಯಾದ ತಕ್ಷಣ ಅಪರಿಚಿತ ವ್ಯಕ್ತಿಯೊಬ್ಬ ಕ್ಯಾಶ್ ಪೆಟ್ಟಿಗೆಗೆ ಕೈ ಹಾಕಿ ಹಣವನ್ನು ಕದ್ದಿದ್ದಾನೆ.