ಉಳ್ಳಾಲ, ಡಿ. 19 (DaijiworldNews/TA): ಡಿಸೆಂಬರ್ 14ರಂದು ಮಂಗಳೂರಿನ ಪೆರ್ಮನ್ನೂರಿನ ಸಂತ ಸೆಬಾಸ್ಟಿಯನ್ ಧರ್ಮಕೇಂದ್ರ ಇದರ ವ್ಯಾಪ್ತಿಯಲ್ಲಿ ಬರುವ ಸಂತ ರೀಟಾ ವಾಳೆಯ ಗುರಿಕಾರಿಣಿ ಐರಿನ್ ಡಿಸೋಜಾ, ಪ್ರಮಿತ್ ಡಿಸೋಜಾ, ಅಶೋಕ್ ಡಿಸೋಜಾ, ಆಶೀಶ್ ಕಿರಣ್ ಡಿಸೋಜಾ, ರಾಜೇಶ್ ಡಿಸೋಜಾ ಹಾಗೂ ಯುವಕ ಮಂಡಲದ ಇತರೆ ಸದಸ್ಯರು ಹಾಗೂ ಭಕ್ತಾಧಿಗಳಿಂದ ಕ್ರಿಸ್ಮಸ್ ಟ್ಯಾಬ್ಲೋ 2025 ಕಾರ್ಯಕ್ರಮ ನಡೆಯಿತು.


ಧರ್ಮಕೇಂದ್ರದ ಧರ್ಮಗುರುಗಳಾದ ರೆವರೆಂಡ್ ಫಾದರ್ ಸಿಪ್ರಿಯಾನ್ ಪ್ರಿಂಟೋ ಈ ಕಾರ್ಯಕ್ಕೆ ಆಶೀರ್ವಚನ ಮಾಡಿದರು. ಟ್ಯಾಬ್ಲೋ ಪೆರ್ಮನ್ನೂರು ವ್ಯಾಪ್ತಿಯ ಕಿಂಗ್ ಸ್ಟಾರ್ ಮೈದಾನ, ಉಳ್ಳಾಲ ಬಸ್ ನಿಲ್ದಾಣ, ಸೋಮೇಶ್ವರ, ಜೆಪ್ಪಿನಮೊಗರು, ಆಡಂಕುದ್ರು ವ್ಯಾಪ್ತಿಯಾಗಿ ವಾಪಸ್ ತೊಕ್ಕೊಟ್ಟು ಬಸ್ ನಿಲ್ದಾಣ ಬಳಿಕ ಉಳ್ಳಾಲ ನಿರ್ಮಲಾ ಕಾನ್ವೆಂಟ್ ಆಗಿ ಮುಕ್ತಾಯಗೊಂಡಿತು.