ಸುಳ್ಯ, ಡಿ. 19 (DaijiworldNews/TA): ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳ ಸುಳ್ಯ ತಾಲೂಕು ಮಟ್ಟದ ಯೋಜನಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಅಧ್ಯಕ್ಷತೆಯಲ್ಲಿ ನಡೆಯಿತು.

ಗೃಹಲಕ್ಷ್ಮಿ ಯೋಜನೆಯ ಪ್ರಗತಿ ಪರಿಶೀಲಿಸಿ ನವೆಂಬರ್ ತಿಂಗಳ ಸಭೆಯ ವಿಷಯಗಳ ಬಗ್ಗೆ ಕೈಗೊಂಡಿರುವ ಕ್ರಮಗಳ ಪಾಲನಾ ವರದಿಯನ್ನು ಸಭೆಯಲ್ಲಿ ಚರ್ಚಿಸಲಾಯಿತು. ಸದಸ್ಯ ಭವಾನಿಶಂಕರ್ ಕಲ್ಮಡ್ಕ ಮಾತನಾಡಿ ಬಾಳುಗೋಡು ಗ್ರಾಮದ ಕೊತ್ನಡ್ಕ ನಿವಾಸಿ ಸುಂದರಿ ಅಜಿಲ ಎಂಬವರಿಗೆ ಸೂಕ್ತ ದಾಖಲಾತಿ ಇಲ್ಲದೆ ಆಧಾರ್ ಕಾರ್ಡ್ ಇಲ್ಲ. ಅವರಿಗೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಆಧಾರ್ ಕಾರ್ಡ್ ಮಾಡಿಕೊಡುವಂತೆ ಅಧಿಕಾರಿಗಳ ಗಮನಕ್ಕೆ ತಂದರು.
ಅನ್ನ ಭಾಗ್ಯ ಯೋಜನೆಯ ಪ್ರಗತಿ ಬಗ್ಗೆ ಕಳೆದ ಸಭೆಯ ವಿಷಯಗಳ ಬಗ್ಗೆ 776 ಬಿಪಿಎಲ್ ಪಡಿತರ ಚೀಟಿಗಳ ಪೈಕಿ 212 ಪಡಿತರ ಚೀಟಿಗಳನ್ನು ಎ ಪಿ ಎಲ್ ಆಗಿ ಪರಿವರ್ತಿಸಲಾಗಿದೆ. 242 ಪಡಿತರ ಚೀಟಿಯನ್ನು ಯಥಾಸ್ಥಿತಿಯಲ್ಲಿ ರಿಸಲಾಗಿದೆ. 322 ಕಾರ್ಡ್ ಗಳು ಪರಿಶೀಲನೆಗೆ ಬಾಕಿ ಇದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.