ಮಂಗಳೂರು/ಉಡುಪಿ, ಡಿ. 14 (DaijiworldNews/AA): ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ತೀವ್ರ ಇಳಿಕೆ ದಾಖಲಾಗಿದ್ದು, ಇದರಿಂದ ಚಳಿಯ ಪ್ರಮಾಣ ಗಣನೀಯ ಹೆಚ್ಚಳವಾಗಿದೆ.

ಗ್ರಾಮೀಣ ಭಾಗದಲ್ಲಿ, ಮುಂಜಾನೆಯಿಂದಲೇ ಆರಂಭವಾಗುವ ಚಳಿ ಮಧ್ಯಾಹ್ನದವರೆಗೂ ಮುಂದುವರಿಯುತ್ತದೆ. ಬೆಳಗಿನ ಜಾವದಲ್ಲಿ ದಟ್ಟವಾದ ಮಂಜು ಕವಿದ ವಾತಾವರಣವು ಸ್ವಾಭಾವಿಕವಾಗಿ ಚಳಿಯನ್ನು ತೀವ್ರಗೊಳಿಸುವುದರಿಂದ ಹೊರಗೆ ಓಡಾಡುವ ಜನರಿಗೆ ಅನಾನುಕೂಲವಾಗುತ್ತಿದೆ. ಕಳೆದ ವಾರದಲ್ಲಿ ತಾಪಮಾನದಲ್ಲಿ ಏರಿಳಿತಗಳು ಕಂಡುಬಂದಿದ್ದು, ಮುಂದಿನ ಕೆಲವು ದಿನಗಳವರೆಗೆ ಇದೇ ರೀತಿಯ ಹವಾಮಾನ ಪರಿಸ್ಥಿತಿಗಳು ಮುಂದುವರಿಯುವ ಸಾಧ್ಯತೆಯಿದೆ.
ಮಂಗಳೂರಿನ ಸರಾಸರಿ ಕನಿಷ್ಠ ತಾಪಮಾನ
ದಿನಾಂಕ ಕನಿಷ್ಠ ತಾಪಮಾನ (ಸೆಲ್ಸಿಯಸ್)
ಡಿಸೆಂಬರ್ 9|20.5
ಡಿಸೆಂಬರ್ 10|21.9
ಡಿಸೆಂಬರ್ 11|21.5
ಡಿಸೆಂಬರ್ 12|19.5
ಡಿಸೆಂಬರ್ 13|20.3
ಉಡುಪಿಯ ಸರಾಸರಿ ಕನಿಷ್ಠ ತಾಪಮಾನ
ದಿನಾಂಕ ಕನಿಷ್ಠ ತಾಪಮಾನ (ಸೆಲ್ಸಿಯಸ್)
ಡಿಸೆಂಬರ್ 9|21.6
ಡಿಸೆಂಬರ್ 10|21.6
ಡಿಸೆಂಬರ್ 11|21.4
ಡಿಸೆಂಬರ್ 12|21.6
ಡಿಸೆಂಬರ್ 13|20.8