ಕಾಸರಗೋಡು, ಡಿ. 14 (DaijiworldNews/TA): ಕುಂಬಳೆ ಪುತ್ತಿಗೆಯಲ್ಲಿ ನಕಲಿ ಮತದಾನಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಲಡ್ಕ ನಿವಾಸಿ ಸಹದ್ನನ್ನು ಕುಂಬಳೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಡಿಸೆಂಬರ್.11 ರಂದು ಸಂಜೆ 5.30 ಕ್ಕೆ ಪುತ್ತಿಗೆ ಪಂಚಾಯತ್ನ ಚೆನ್ನಿಕ್ಕೋಡಿ 1ನೇ ವಾರ್ಡ್ ಮತಗಟ್ಟೆಯಾದ ಧರ್ಮತ್ತಡ್ಕ ಶಾಲೆಯಲ್ಲಿ ಸಹದ್ ನಕಲಿ ಮತದಾನಕ್ಕೆ ಯತ್ನಿಸಿದ್ದು, ಪ್ರಿಸೈಡಿಂಗ್ ಆಫೀಸರ್ ನೀಡಿದ ದೂರಿನಂತೆ ಪೊಲೀಸರು ಸಹದ್ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.