ಕಾಸರಗೋಡು, ಡಿ. 13 (DaijiworldNews/TA): ಜಿಲ್ಲಾ ಪಂಚಾಯತ್ ನ ಪುತ್ತಿಗೆ ಮತ್ತು ಬೇಕಲ ಡಿವಿಜನ್ ನ ಮರು ಮತ ಎಣಿಕೆಗೆ ಜಿಲ್ಲಾ ಚುನಾವಣಾಧಿಕಾರಿ ಕೆ. ಇಂಪಶೇಖರ್ ಆದೇಶ ನೀಡಿದ್ದಾರೆ.

ಮರು ಮತ ಎಣಿಕೆಗೆ ಲಭಿಸಿದ ದೂರಿನಂತೆ ಆದೇಶ ನೀಡಲಾಗಿದೆ. ಡಿ.15 ರಂದು ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ನಡೆಯಲಿದೆ. ಪುತ್ತಿಗೆ ಯಲ್ಲಿ ಕಾಂಗ್ರೆಸ್ ನ ಸೋಮಶೇಖರ ಜೆ. ಎಸ್ ಅವರು ಕೇವಲ 418 ಮತಗಳ ಅಂತರಿಂದ ಬಿಜೆಪಿಯ ಮಣಿಕಂಠ ರೈ ವಿರುದ್ಧ ಜಯಗಳಿಸಿದ್ದರು. ಬೇಕಲ ದಲ್ಲಿ LDF ನ ರಾಧಿಕಾ ಟಿ.ವಿ ಕೇವಲ 267 ಮತಗಳ ಅಂತರದಿಂದ UDF ನ ಶಾಹಿದಾ ರಶೀದ್ ವಿರುದ್ಧ ಗೆಲುವು ಸಾಧಿಸಿದ್ದರು.