ಉಡುಪಿ, ಡಿ. 12 (DaijiworldNews/AK): ಕಳೆದ 43 ವರ್ಷಗಳಿಂದ ಜನರಿಗೆ ಉತ್ತಮ ಸೇವೆಯನ್ನು ನೀಡುತ್ತಿರುವ ಆಶಿಶ್ ಟ್ರಾವೆಲ್ಸ್ ನೂತನ ಶಾಖೆಯನ್ನು ಉಡುಪಿಯ ಕ್ಲಾಕ್ ಟವರ್ ಸಮೀಪದ ಮಾಂಡವಿ ಕ್ಯಾಪಿಟಲ್ ನ ನೆಲಮಹಡಿಯಲ್ಲಿ ಶುಭಾರಂಭಗೊಂಡಿತು.

ನೂತನ ಮಳಿಗೆಯನ್ನು ಹಿರಿಯಪ್ರಸೂತಿ ತಜ್ಞೆ ಹಾಗೂ ಸ್ತ್ರೀ ರೋಗ ತಜ್ಞರಾದ ಡಾ.ಆಶಾ ಮತ್ತು ಮುಖ್ಯ ಅತಿಥಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು. ಉಡುಪಿ ಸಿ ಎಸ್ ಐ ಜ್ಯುಬಿಲಿ ಚರ್ಚಿನ ಅತಿ ವಂದನೀಯ ರೆವರೆಂಡ್ ಐವನ್ ಡಿ ಸೋನ್ಸ್ ಅವರು ಪ್ರಾರ್ಥನೆ ಮತ್ತು ಆಶೀರ್ವಾದ ನೀಡಿದರು. ಮಾಂಡವಿ ರಿಯಲ್ ಎಸ್ಟೇಟ್ ಡೆವಲಪರ್ ನಿರ್ದೇಶಕರಾದ ಗ್ಲೆನ್ ಡಯಾಸ್ , ಪ್ರಕಾಶ್ ರಿಟೈಲ್ ಪ್ರೈವೆಟ್ ಲಿಮಿಟೆಡ್ (ಹರ್ಷ) ವ್ಯವಸ್ಥಾಪಕ ನಿರ್ದೇಶಕ ಕೆ. ಸೂರ್ಯಪ್ರಕಾಶ್,, ಚಾರ್ಟರ್ಡ್ ಅಕೌಂಟೆಟ್ ಗಣೇಶ್ ಬಿ. ಕಾಂಚನ್ ಶುಭ ಹಾರೈಸಿದರು.
ಪ್ರಕಾಶ್ ರಿಟೇಲ್ ಪ್ರೈ. ಲಿಮಿಟೆಡ್ , ಉಡುಪಿ, ನಿರ್ದೇಶಕ ಹರೀಶ್ ಎಂ., ಪ್ರಕಾಶ್ ರಿಟೈಲ್ ಪ್ರೈವೆಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಕೆ ಸೂರ್ಯಪ್ರಕಾಶ್,, ಮಾಂಡವಿ ರಿಯಲ್ ಎಸ್ಟೇಟ್ ಡೆವಲಪರ್ ನಿರ್ದೇಶಕರಾದ ಗ್ಲೆನ್ ಡಯಾಸ್ ಮತ್ತು ಜೇಸನ್ ಡಯಾಸ್, ಚಾರ್ಟರ್ಡ್ ಅಕೌಂಟೆಟ್ ಗಣೇಶ್ ಬಿ. ಕಾಂಚನ್, ಆಶಿಶ್ ಟ್ರಾವೆಲ್ಸ್ ಸಂಸ್ಥೆಯ ಸಂಸ್ಥಾಪಕಿ ಎಡ್ನಾ ಕ್ಲಾರಿಸ್ ಕುಂದರ್, ಆಶಿಶ್ ಪತ್ನಿ ಶಿಲ್ಪಾ ,ಗಣ್ಯರಾದ ಹರೀಶ್ ಕಿಣಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಆಶಿಶ್ ಟ್ರಾವೆಲ್ಸ್ ಸಂಸ್ಥೆಯ ಮಾಲಿಕರಾದ ಆಶಿಶ್ ಅವರು ಅತಿಥಿಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು, ಕಾರ್ಯಕ್ರಮವನ್ನು ಸಂದೀಪ್ ಭಕ್ತರವರು ನಿರೂಪಿಸಿ ಗಣ್ಯರಿಗೆ ವಂದನೆಯನ್ನು ಸಲ್ಲಿಸಿದರು.